ಮಂಗಳೂರಿನಲ್ಲಿ ಸರ್ಕಾರದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಹಜ್ ಭವನ ನಿರ್ಮಾಣ ಸ್ಥಳದ ವಿಷಯದಲ್ಲಿ ಸೃಷ್ಟಿಯಾದ ಗೊಂದಲದ ಬಗ್ಗೆ ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ,ಎ. ಬಿ ಇಬ್ರಾಹಿಮ್ ರವರು ವಿಷಯ ಪ್ರಸ್ತಾಪಿಸುತ್ತಾ ದ.ಕ .ಜಿಲ್ಲೆಯವರು ಪ್ರತೀ ಸರಕಾರಿ ಯೋಜನೆಗಳಿಗೆ ಆಕ್ಷೇಪ,ವಿರೋಧ ವ್ಯಕ್ತ ಪಡಿಸುತ್ತಾರೆ ಎಂದು ಹೇಳುವ ಭರದಲ್ಲಿ ಜಿಲ್ಲೆಯ ಜನರನ್ನು ವಿಘ್ನ ಸಂತೋಷಿಗಳು ಎಂದು ಸಂಭೋಧಿಸಿರುವುದು ಖಂಡನೀಯ.
ಹಜ್ ಭವನ ನಿರ್ಮಾಣ ವಿಷಯದಲ್ಲಿ ಜಿಲ್ಲೆಯ ಜನರು ಅದರಲ್ಲೂ ಮುಸ್ಲಿಮ್ ಸಮುದಾಯದ ವರು, ಭವನ ನಿರ್ಮಾಣ ಆಗಬೇಕು ಎಂದು ಸಹಕರಿಸುವರೇ ಹೊರತು ವಿರೋಧಿಸುವರು ಅಲ್ಲ. ಪ್ರಸ್ತುತ ಹಜ್ ಭವನಕ್ಕೆ ಮಂಗಳೂರು ವಿಮಾನ ನಿಲ್ದಾಣದ ಸಮೀಪದ ಕೆಂಜಾರು ಗ್ರಾಮದಲ್ಲಿ ಸರ್ಕಾರವು ಅದೇ ಉದ್ದೇಶಕ್ಕೆ ಮಂಜೂರು ಮಾಡಿದ ಜಮೀನಿನಲ್ಲಿ ಪ್ರಸ್ತುತ ಉದ್ಭವಿಸಿರುವ ಕಾನೂನಾತ್ಮಕ ಅಡೆ ತಡೆಗಳನ್ನು ನಿವಾರಿಸಿ ಹಜ್ ಭವನ ನಿರ್ಮಾಣ ಆಗ ಬೇಕೆಂದು ಜಿಲ್ಲೆಯ ಸರ್ವರೂ ಬಯಸುತ್ತಾರೆ.
ಈ ಬಗ್ಗೆ ಅಗತ್ಯವಿರುವ ಕ್ರಮವನ್ನು ಎ. ಬಿ.ಇಬ್ರಾಹಿಂ ರವರು ಮುಂದುವರಿಸಲಿ ಎಂದು ವಿನಂತಿಸುತ್ತೇವೆ. ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಯಾದ ಇಬ್ರಾಹಿಂ ರವರು ಈ ಬಗ್ಗೆ ಯೋಚಿಸುವುದು ಒಳಿತು.
ಕೆ.ಅಶ್ರಫ್
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.