janadhvani

Kannada Online News Paper

ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕ ರೋಗ ಪ್ರಸರಣ ಕುರಿತಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಅವಕಾಶ ಸಿಕ್ಕಿದಾಗಲೆಲ್ಲ ಈ ವಿಷಯದಲ್ಲಿ ಚೈನಾ ವಿರುದ್ದ ಟ್ರಂಪ್ ಆರೋಪ ಮಾಡುತ್ತಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಟ್ರಂಪ್, ಮತ್ತೊಮ್ಮೆ ಚೀನಾ ವಿರುದ್ದ ವಾಗ್ಧಾಳಿ ನಡೆಸಿದ್ದಾರೆ. ಆದರೆ ಈ ಬಾರಿ ಹೆಚ್ಚು ಕಠಿಣ ಶಬ್ದಗಳ ಮೂಲಕ ಟೀಕಿಸಿದ್ದಾರೆ.
ಕೊರೊನಾ ವೈರಸ್ ಚೈನಾದಿಂದ ಬಂದಿದೆ. ಜಗತ್ತಿಗೆ ಹರಡದಂತೆ ತಡೆಯಬಹುದಿತ್ತು. ಅದನ್ನು ಸುಲಭವಾಗಿ ಮಾಡುವ ಅವಕಾಶವೂ ಅವರಿಗೆ ಇತ್ತು. ಆದರೂ, ಅವರು ಮಾಡಲಿಲ್ಲ. ಉದ್ದೇಶ ಪೂರ್ವಕವಾಗಿಯೇ ಜಗತ್ತಿಗೆ ಕೊರೊನಾ ಸೋಂಕು ಹರಡಲಿ ಎಂದು ಚೈನಾ ತಡೆಯಲಿಲ್ಲ ಎಂದು ದೂರಿದ್ದಾರೆ.

ಕೊರೊನಾ ಚೈನಾದಿಂದ ಹಬ್ಬಿದೆ ಎಂಬುದಕ್ಕೆ ನಮ್ಮ ಬಳಿ ಸಾಕಷ್ಟು ಆಧಾರಗಳಿವೆ. ಹೊರಗಿನ ಪ್ರಪಂಚಕ್ಕೆ ಹರಡಂತೆ ತಡೆಯುವ ಶಕ್ತಿ ಇದ್ದರೂ ಅ ಕೆಲಸವನ್ನು ಅವರು ಮಾಡಲಿಲ್ಲ. ಉದ್ದೇಶ ಪೂರ್ವಕವಾಗಿ ಸೋಂಕನ್ನು ಇಡೀ ವಿಶ್ವಕ್ಕೆ ಹಬ್ಬಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ

error: Content is protected !! Not allowed copy content from janadhvani.com