janadhvani

Kannada Online News Paper

ಕೋವಿಡ್ 19 ನಿಯಂತ್ರಣಕ್ಕೆ ಕೇರಳ ಸರಕಾರದ ದಿಟ್ಟ ಹೆಜ್ಜೆ, ಒಂದು ವರ್ಷದ ಅವಧಿಗೆ ಮಾರ್ಗಸೂಚಿ ಕಡ್ಡಾಯ

ಕೊರೊನಾ ವೈರಸ್ ಸೋಂಕು ಹೆಚ್ಚಳವನ್ನು ನಿಗ್ರಹಿಸುವ ಪ್ರಮುಖ ಹೆಜ್ಜೆಯಾಗಿ ಜನರು ಒಂದು ವರ್ಷದವರೆಗೆ ಕೋವಿಡ್ -19 ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಕೇರಳ ಸರ್ಕಾರ ಕಡ್ಡಾಯಗೊಳಿಸಿದೆ.

ಜುಲೈ 2021 ರವರೆಗೆ ಜಾರಿಗೆ ಬರುವ ರಾಜ್ಯ ಸಾಂಕ್ರಾಮಿಕ ರೋಗದ ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು, ಮಾಸ್ಕ್ ಧರಿಸದಿದ್ದರೆ 10,000 ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದ ದೇಶದ ಮೊದಲ ರಾಜ್ಯ ಕೇರಳವಾಗಿದ್ದರೂ ಕೋವಿಡ್ ನಿಯಂತ್ರಣದಲ್ಲಿ ಅದು ವಿಶ್ವದ ಗಮನ ಸೆಳೆದಿದೆ. ಅಲ್ಲಿ ಸದ್ಯಕ್ಕೆ 5000 ಕ್ಕಿಂತಲೂ ಕಡಿಮೆ ಪ್ರಕರಣಗಳಿದ್ದರೂ ಸಹ ಮುಂಜಾಗ್ರತೆ ಕ್ರಮವಾಗಿ ಮುಂದಿನ ಒಂದು ವರ್ಷದವರೆಗೂ ನಿಬಂಧನೆಗಳನ್ನು ಕಡ್ಡಾಯಗೊಳಿಸಿದೆ.

ಮಾರ್ಗಸೂಚಿಗಳು ಕೆಳಗಿನಂತಿವೆ:

1) ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಅಥವಾ ಫೇಸ್ ಕವರ್ ಧರಿಸಬೇಕು. ಕೆಲಸದ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಸಹ ಕಡ್ಡಾಯವಾಗಿದೆ.

2) ವೈರಸ್ ಹರಡುವುದನ್ನು ತಡೆಯಲು ಎಲ್ಲಾ ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುವುದು ಅವಶ್ಯಕ.

3) ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡ ಧರಿಸದಿದ್ದರೆ 10,000 ರೂ ದಂಡ.

4) ಕೇರಳದಲ್ಲಿ ಮದುವೆ ಆಚರಣೆಗೆ ಗರಿಷ್ಠ 50 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು.

5) ಕೋವಿಡ್ -19 ಅಲ್ಲದ ರೋಗಿಗಳ ಅಂತ್ಯಕ್ರಿಯೆಗೆ, 20 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು.

6) ಯಾವುದೇ ಸಾಮಾಜಿಕ ಕಾರ್ಯಕ್ರಮಕ್ಕೆ ಸ್ಥಳೀಯ ಪ್ರಾಧಿಕಾರದ ಅನುಮತಿ ಅಗತ್ಯವಾಗಿರುತ್ತದೆ.

7) ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

8) ಪ್ರಯಾಣಕ್ಕಾಗಿ ಇತರ ರಾಜ್ಯಗಳಿಂದ ಕೇರಳಕ್ಕೆ ಬರುವವರು ಕೇರಳ ಸರ್ಕಾರದ ಜಾಗ್ರತಾ ಇ-ಪ್ಲಾಟ್‌ಫಾರ್ಮ್ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಆದರೂ ಅಂತರರಾಜ್ಯ ಪ್ರಯಾಣಕ್ಕೆ ಪಾಸ್ ಅಗತ್ಯವಿಲ್ಲ.

9) ಸಾಮಾಜಿಕ ಅಂತರದ ನಿಯಮಗಳನ್ನು ಕಾಪಾಡಿಕೊಳ್ಳಲು ರಾಜ್ಯದಾದ್ಯಂತ ಯಾವುದೇ ಅಂಗಡಿಗಳಲ್ಲಿ ಏಕಕಾಲದಲ್ಲಿ 20 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು.

error: Content is protected !! Not allowed copy content from janadhvani.com