ರಿಯಾದ್: ಸೌದಿ ಅರೇಬಿಯಾದಲ್ಲಿ ಇಖಾಮ ಕಾಲಾವಧಿ ಮುಕ್ತಾಯಗೊಂಡವರು ಹಾಗೂ ಹುರೂಬ್ ಆದವರಿಗೆ ದೇಶ ತೊರೆಯಲು ಭಾರತೀಯ ರಾಯಭಾರ ಕಚೇರಿ ಅಂತಿಮ ನಿರ್ಗಮನದ ಅವಕಾಶ ಕಲ್ಪಿಸುತ್ತಿದೆ.
ಹುರೂಬ್ (ಪರಾರಿಯಾಗಿದ್ದಾಗಿ ಪ್ರಾಯೋಜಕರಿಂದ ದೂರು ನೀಡಲ್ಪಟ್ಟವರು), ಮತ್ಲೂಬ್(ಪೋಲೀಸ್ ಪ್ರಕರಣ ಇರುವವರು),ವಿವಿಧ ಪ್ರಕರಣದಲ್ಲಿ ದಂಡ ವಿಧಿಸಲ್ಪಟ್ಟು ಸಂಕಷ್ಟಕ್ಕೀಡಾದವರು ಮುಂತಾದವರಿಗೆ ದೇಶ ತೊರೆಯಲು ಫೈನಲ್ ಎಕ್ಸಿಟ್ ನೀಡಲಾಗುತ್ತದೆ.
ಇದಕ್ಕಾಗಿ ನೋಂದಣಿಯನ್ನು ಭಾರತೀಯ ರಾಯಭಾರ ಕಚೇರಿ ಪ್ರಾರಂಭಿಸಿದೆ. ವಿಶೇಷ ಫಾರ್ಮ್ ಅನ್ನು ಭಾರತದ ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನೋಂದಣಿಯನ್ನು ಪೂರ್ಣಗೊಳಿಸಬಹುದು.
ನೋಂದಣಿ ಲಿಂಕ್: https://www.eoiriyadh.gov.in/alert_detail/?alertid=45
ಅರ್ಜಿ ಭರ್ತಿ ಮಾಡುವ ಕ್ರಮ
1. ಹೆಸರು 2. ಹೆಸರು ಇಕಾಮಾ ಪ್ರಕಾರ ಅರೇಬಿಕ್ ಭಾಷೆಯಲ್ಲಿ ಸೇರಿಸಿ 3. ಸೌದಿಯ ಮೊಬೈಲ್ ಸಂಖ್ಯೆ 4. ವಾಟ್ಸಾಪ್ ಸಂಖ್ಯೆ 5. ಸ್ವದೇಶದ ಮೊಬೈಲ್ ಸಂಖ್ಯೆ 6. ಇಮೇಲ್ ಐಡಿ 7.ಸೌದಿಯಲ್ಲಿ ಕೆಲಸ ಮಾಡುವ ಪ್ರಾಂತ್ಯ 9. ಪಾಸ್ಪೋರ್ಟ್ ಸಂಖ್ಯೆ 9. ಪಾಸ್ಪೋರ್ಟ್ ಮುಕ್ತಾಯ ದಿನಾಂಕ 10. ಪಾಸ್ಪೋರ್ಟ್ನ ಪ್ರಸ್ತುತ ಸ್ಥಿತಿ (ಕಳೆದುಹೋಗಿದೆಯೋ, ಅವಧಿ ಮುಗಿದಿದೆ ಅಥವಾ ಇಲ್ಲ, ತುರ್ತು ಪ್ರಮಾಣಪತ್ರ ಅಥವಾ ಅದರ ಮುಕ್ತಾಯ ದಿನಾಂಕ) 11. ಪಾಸ್ಪೋರ್ಟ್ನ ಪ್ರತಿ. 12. ಇಕಾಮಾ ಅವಧಿ ಮುಗಿದ ದಿನಾಂಕ 13. ಇಕಾಮಾ ಅವರ ಪ್ರಸ್ತುತ ಸ್ಥಿತಿ (ಹುರುಬ್, ಮತ್ಲೂಬ್ ಮತ್ತು ವಿವಿಧ ದಂಡಗಳ ಹೆಸರುಗಳು ಯಾವ ವಿಭಾಗ) 14. ಇಕಾಮಾ ಅಥವಾ ವೀಸಾದ ಪ್ರತಿ 15. ವೀಸಾ ಮಾಹಿತಿಯನ್ನು ಸೇರಿಸಿ.
ಅಂತಿಮ ನಿರ್ಗಮನವನ್ನು ಪಡೆಯುವುದರೊಂದಿಗೆ ಸ್ವದೇಶಕ್ಕೆ ಪ್ರಯಾಣ ಸಾಧ್ಯವಾಗಲಿದೆ. ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಶೀಘ್ರವಾಗಿ ನೋಂದಣಿ ಮಾಡಬೇಕಿದೆ. ನೋಂದಾವಣೆಗೆ ಪರಿಣಿತರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸೌದಿ ದೂತಾವಾಸದ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕೀಸಿ.
00966542126748, 00966-11-4884697