ನವದೆಹಲಿ:ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಜನರು ಮನೆಯಲ್ಲೇ ಇರಲು ಬಯಸಿದ್ದು, ಮೊಬೈಲ್ ಆಪ್ ಮೂಲಕ ಹಣ ವರ್ಗಾವಣೆ ಹೆಚ್ಚಾಗಿದೆ.
ಪೇಮೆಂಟ್ ಆಪ್ ಗಳ ಸಹಾಯದಿಂದ ಖಾತೆಯಿಂದ-ಖಾತೆಗೆ ನಡೆಯುವ ಹಣದ ವಹಿವಾಟಿನ ಪ್ರಮಾಣ 2019 ರಲ್ಲಿ ಶೇ.163 ರಷ್ಟು (287 ಬಿಲಿಯನ್ ಡಾಲರ್ ನಷ್ಟು) ಏರಿಕೆಯಾಗಿದ್ದು, ದಾಖಲೆಯ ಏರಿಕೆ ಇದಾಗಿದೆ ಎಂದು ಎಸ್&ಪಿ ಗ್ಲೋಬಲ್ ಮಾರ್ಕೆಟ್ ಇಂಟಲಿಜೆನ್ಸ್ 2020 ಇಂಡಿಯಾ ಮೊಬೈಲ್ ಪೇಮೆಂಟ್ ಮಾರ್ಕೆಟ್ ನ ವರದಿ ಹೇಳಿದೆ.
ಡೆಬಿಟ್ ಕಾರ್ಡ್ ಗಳು, ಕ್ರೆಡಿಟ್ ಕಾರ್ಡ್ ಗಳನ್ನು ಬಳಕೆ ಮಾಡಿ ಪಾವತಿ ಮಾಡುವ ಪಾಯಿಂಟ್ ಆಫ್ ಸೇಲ್ ವಹಿವಾಟಿಗಿಂತಲೂ ಮೊಬೈಲ್ ಪೇಮೆಂಟ್ ಆಪ್ ಗಳಾದ ಗೂಗಲ್ ಪೇ, ಫೋನ್ ಪೇಗಳಿಂದ ಪಾವತಿ ಮಾಡುವ ವಹಿವಾಟು ಹೆಚ್ಚಾಗಿದ್ದು, ಎಟಿಎಂ ವಿತ್ ಡ್ರಾವಲ್ ಗಳಿಗಿಂತಲೂ ಈ ಪ್ರಮಾಣ ಏರಿಕೆ ಕಂಡಿದೆ ಎನ್ನುತ್ತಿದೆ ವರದಿ.