janadhvani

Kannada Online News Paper

ಯುಎಇಯಲ್ಲಿ ಕರ್ನಾಟಕದ ಮಾತೃಭಾಷೆಯಲ್ಲೇ ಆನ್ಲೈನ್ ಮದ್ರಸ ಆರಂಭಿಸಲು ತಯಾರಿ

ಕನ್ನಡಿಗ ಕುಟುಂಬಗಳ ಬಹುದಿನಗಳ ಕನಸು ನನಸಾಗುವ ಸಂದರ್ಭಊರಿನ ಮದ್ರಸ ರೀತಿಯಲ್ಲಿ ನಮಗೂ ಮದ್ರಸ ಬೇಕೆಂಬುದು ಅನಿವಾಸಿ ಕನ್ನಡಿಗ ಕುಟುಂಬಗಳ ಬಹುದಿನಗಳ ಬೇಡಿಕೆಯಾಗಿದ್ದು ಮಕ್ಕಳ ಧಾರ್ಮಿಕ ಶಿಕ್ಷಣ ಅಭಿವೃದ್ಧಿ ಹೊಂದಬೇಕಾದರೆ ಮಾತೃಭಾಷೆಯಲ್ಲೇ ಶಿಕ್ಷಣ ದೊರೆತಾಗ ಮಾತ್ರ ಅದರ ಮಾಧುರ್ಯವನ್ನು ಸವಿಯಲು ಮತ್ತು ಮಕ್ಕಳಿಗೂ ಸುಲಲಿಲತಾವಾಗಿ ಅರ್ಥೈಸಿಗೊಳ್ಳಲು ಸಾಧ್ಯ. ಧಾರ್ಮಿಕ ಜ್ಞಾನ ಎಂಬುವುದು ಮನುಷ್ಯ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಧಾರ್ಮಿಕ ಭೋದನೆಯೊಂದಿಗೆ ಉತ್ತಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕುವುದು ಪ್ರತಿಯೊಬ್ಬ ಸತ್ಯವಿಶ್ವಾಸಿಯ ಆದ್ಯ ಕರ್ತವ್ಯವೂ ಆಗಿದೆ.ಪವಿತ್ರ ಇಸ್ಲಾಮಿನ ಜೀವ ಕೂಡ ಇದುವೇ ಆಗಿದೆ.ಉತ್ತಮ ಶಿಷ್ಟಾಚಾರವನ್ನು ಮೈಗೂಡಿಸಿಕೊಂಡು ಬದುಕಬೇಕಾದರೆ ಉತ್ತಮ ಧಾರ್ಮಿಕ ಭೋದನೆ ಅತ್ಯಗತ್ಯ ಈ ನಿಟ್ಟಿನಲ್ಲಿ ಇದೀಗ ಶಾರ್ಜಾ ಅಶ್ಶಾರಿಕತುಲಿಲ್ ಕುರ್ಆನಿಲ್ ಕರೀಂ & ಅಲ್ ಸುನ್ನ ಅನುಮತಿಯೊಂದಿಗೆ ಯುಎಇಯಲ್ಲಿ ನೆಲೆಸಿರುವಂತಹ ಅನಿವಾಸಿ ಕುಟುಂಬಗಳಿಗೆ ಕನ್ನಡಿಗರ ಆಡಳಿತ ವ್ಯವಸ್ಥೆಯಲ್ಲಿ ಅಖಿಲ ಭಾರತ ಸುನ್ನೀ ಎಜುಕೇಶನಲ್ ಬೋರ್ಡ್ ಸಿಲೆಬಸ್ ಆಧರಿಸಿ ಮಾತೃ ಭಾಷೆಯಲ್ಲಿ ಉತ್ತಮ ಭಾಷಾ ಜ್ಞಾನ ಹೊಂದಿದ ಉಸ್ತಾದರುಗಳ ಆಯ್ಕೆಯೊಂದಿಗೆ ಕನ್ನಡ, ಬ್ಯಾರಿ, ಮಲಾಮೆ, ಇಂಗ್ಲಿಷ್, ಉರ್ದು, ಹಿಂದಿ ಭಾಷೆಗಳಲ್ಲಿ ಮಕ್ಕಳಿಗೆ ಮದ್ರಸ ಶಿಕ್ಷಣವನ್ನು ನೀಡುವಂತಹ ಉತ್ತಮ ಯೋಜನೆಗೆ ದುನ್ನೂರೈನ್ ಸಂಸ್ಥೆ ದಾಪುಗಾಲಿಟ್ಟಿದೆ.ಯು ಎ ಯಿ ಯಲ್ಲಿ ನೆಲೆಸಿರುವ ಅನಿವಾಸಿಗಳು ಈ ಕೆಳಗಿನ ಕೊಂಡಿಗಳಲ್ಲಿ ವಾಟ್ಸಾಪ್ ಮತ್ತು ವೆಬ್ಸೈಟ್ ಮೂಲಕ ನೊಂದಾಯಿಸಿಕೊಳ್ಳಬಹುದು.https://wa.me/+971553711227
https://wa.me/+971555318631For applicationhttps://www.jotform.com/assign/201554666072051/201574567994066

error: Content is protected !! Not allowed copy content from janadhvani.com