ಮಂಗಳೂರು: ಇಲ್ಲಿನ ಪಂಪ್ ವೆಲ್ ಸರ್ಕಲ್ ಗೆ ಮಹಾವೀರ ವೃತ್ತ ಎಂದು ಹೆಸರು ಇಡಲಾಗಿದೆ. ಮತ್ತೆ ಸಾವರ್ಕರ್ ಹೆಸರಲ್ಲಿ ಫ್ಲೆಕ್ಸ್ ಹಾಕಿದವರ ವಿರುದ್ಧ ಸರ್ಕಾರ, ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಒತ್ತಾಯಿಸಿದ್ದಾರೆ.
ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಫ್ಲೆಕ್ಸ್ ಹಾಕಿದವರನ್ನು ಪತ್ತೆಹಚ್ಚದಿದ್ದರೆ ಅದು ಪೊಲೀಸರ ವೈಫಲ್ಯವಾಗುತ್ತದೆ. ಪತ್ತೆ ಹಚ್ಚದಿದ್ರೆ ಸಂಸದರ, ಶಾಸಕರು ಕಿಡಿಗೇಡಿಗಳಿಗೆ ಬೆಂಬಲ ಕೊಟ್ಟಂತೆ ಆಗುತ್ತಿದೆ. ಕಿಡಿಗೇಡಿಗಳನ್ನು ಪತ್ತೆಹಚ್ಚುವ ಕಾರ್ಯ ಸರ್ಕಾರ, ಜಿಲ್ಲಾಡಳಿತಕ್ಕೆ ಬಿಡುತ್ತಿದ್ದೇನೆ, ಜನರು ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದರು.
ಸರ್ಕಾರಿ ಆಸ್ಪತ್ರೆ ಇಲ್ಲ- ಬಡವರಿಗೆ ಸಂಕಷ್ಟ
ದಕ್ಷಿಣ ಕನ್ನಡ ಜಿಲ್ಲೆಗೆ ಈಗ ಸರ್ಕಾರಿ ಆಸ್ಪತ್ರೆಯಿಲ್ಲ. ವೆನ್ಲಾಕ್ ಆಸ್ಪತ್ರೆ ಖಾಲಿ ಮಾಡಿದ್ದಾರೆ. ವೆನ್ಲಾಕ್ ಆಸ್ಪತ್ರೆ ಖಾಲಿ ಮಾಡುವಾಗ ಹೇಳಿಲ್ಲ ಈಗ ಬಡವರ್ಗದ ಜನ ಸಂಕಷ್ಟ ಪಡುತ್ತಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಹಣ ಕಟ್ಟಲು ಆಗಲ್ಲ. ಬೆಂಗಳೂರಿನ ರೀತಿ ಮಂಗಳೂರು ಅಲ್ಲ, ಬೆಂಗಳೂರಿನಲ್ಲಿ 10 ಸರ್ಕಾರಿ ಆಸ್ಪತ್ರೆ ಇದೆ, ಮಂಗಳೂರಿನಲ್ಲಿ ಇರುವುದು ಒಂದೇ ಸರ್ಕಾರಿ ಆಸ್ಪತ್ರೆ. ವೆನ್ಲಾಕ್ ತಕ್ಷಣ ಒಪಿಡಿ ಆರಂಭ ಮಾಡಬೇಕು, ಜಿಲ್ಲಾಡಳಿತ ಬಡವರ ಕಷ್ಟವನ್ನು ಅರಿಯಬೇಕು ಎಂದು ಖಾದರ್ ಆಗ್ರಹಿಸಿದರು.