janadhvani

Kannada Online News Paper

ಅಶ್ರಫ್ ಕಿನಾರ ಅವರ ಕಾರಿಗೆ ದುಷ್ಕರ್ಮಿಗಳಿಂದ ಹಾನಿ

ಮಂಗಳೂರು :ತನ್ನ ಮನೆಯ ಪಕ್ಕ ನಿಲ್ಲಿಸಲಾಗಿದ್ದ ಕಾರನ್ನು ತಡರಾತ್ರಿ ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ನಗರದ ಕುದ್ರೋಳಿಯಿಂದ ವರದಿಯಾಗಿದೆ.

ಹಲವು ಸಂಘ ಸಂಸ್ಥೆಗಳ ಮುಂಚೂಣಿ ನಾಯಕ, ಕೋವಿಡ್ 19 ಸಂದರ್ಭದಲ್ಲಿ, ಜಿಲ್ಲೆಯ ಜನಸೇವೆಯ ಹರಿಕಾರ ಅಶ್ರಫ್ ಕಿನಾರ ಮಂಗಳೂರು, ಅವರ ಕಾರನ್ನು ಮೇ 28 ರಂದು ರಾತ್ರಿ ತಮ್ಮ ಮನೆಯ ಸಮೀಪದ ಪಾರ್ಕಿಂಗ್ ನಲ್ಲಿರಿಸಲಾಗಿತ್ತು.

ಯಾವುದೋ ದುಷ್ಕರ್ಮಿಗಳು ತಡರಾತ್ರಿಯಲ್ಲಿ ಕಾರಿನ ಎದುರಿನ ಮತ್ತು ಕಿಟಕಿ ಗಾಜುಗಳನ್ನು ಹುಡಿಮಾಡಿ ಹಾನಿಗೊಳಿಸಿದ್ದಾರೆ.ಸಣ್ಣ ಮರದ ದಿಮ್ಮಿಯೊಂದು ಕಾರಿನೊಳಗೆ ಪತ್ತೆಯಾಗಿದ್ದು, ಬಂದರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.