janadhvani

Kannada Online News Paper

ಈದ್ ಅಲ್ವಾ…! ದೇಹ ದೂರವಾದರೇನಾಯಿತು, ಮನಸ್ಸು ಸೇರಲಿ

ರಮಳಾನ್ ತಿಂಗಳು ಬರುವುದಕ್ಕಿಂತ ಎರಡು ತಿಂಗಳ ಮುಂಚೆಯೇ ದುಆ ಮಾಡಲು ಶುರು ಮಾಡಿದೆ ಯಾ ಅಲ್ಲಾಹ್, ರಜಬ್ ಮತ್ತು ಶ’ಅಬಾನ್ ತಿಂಗಳನ್ನು ಅನುಗ್ರಹಿಸಿ ರಮಳಾನ್ ತಿಂಗಳಿಗೆ ತಲುಪಿಸು ಎಂದು.ಅಲ್ಹಮ್ದುಲಿಲ್ಲಾಹ್, ರಮಳಾನ್ ತಿಂಗಳಿಗೆ ತಲುಪಿದೆ ಆದರೆ ಸಮಯ ನನ್ನ ಮಾತೇ ಕೇಳುವುದಿಲ್ಲ.

ಎಷ್ಟು ಕೂಗಿದರೂ ಬಿಟ್ಟು ಹೋಗುತ್ತಿದ್ದೇನೆಂದು ರಮಳಾನ್ ತಿಂಗಳು ಹೇಳುತ್ತಿದೆ.ಅಲ್ಲಾಹನು ನಮ್ಮೆಲ್ಲರ ಪಾಪಗಳನ್ನು ಕ್ಷಮಿಸಿ ಇನ್ನಿರುವ ಜೀವನ ಯಾವುದೇ ತಪ್ಪುಗಳಿಲ್ಲದೆ ಜೀವಿಸಲು ತೌಫೀಖ್ ನೀಡಲಿ. ಹಲವಾರು ರಮಳಾನ್ ತಿಂಗಳನ್ನು ಕರುನಿಸಲಿ.

ಯಾರೂ ಕೂಡ ತಡೆಯಲಿಲ್ಲ ಆದರೂ ನನಗೆ ಮಸೀದಿ ಹೋಗಲು ಆ ವೈರಸ್ ತಡೆಯಾಗಿ ನಿಂತಿದೆ. ಇನ್ನು ಯಾವುತ್ತೂ ಇಂಥಹ ಒಂದು ಪರಿಸ್ಥಿತಿ ಬಾರದಿರಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸುವ. ಇನ್ನೂ ಕೂಡ ನಮ್ಮ ಮುಂದೆ ಹಲವಾರು ಈದ್ ಹಬ್ಬ ಆಚರಣೆ ಇದೆ, ಆದರೆ ಈ ಬಾರಿಯ ಈದ್ ಹಬ್ಬಕ್ಕೆ ಮಸೀದಿಯಲ್ಲಿ ಈದ್ ನಮಾಝ್ ಮಾಡುವಂತಿಲ್ಲ, ಒಟ್ಟಿಗೆ ಸೇರುವಂತಿಲ್ಲ, ಕೈ ಮಿಲಾಯಿಸುವಂತಿಲ್ಲ, HUG ಮಾಡುವಂತಿಲ್ಲ, ಸ್ನೇಹಿತರೊಂದಿಗೆ , ಕಝಿನ್ಸ್’ಗಳೊಂದಿಗೆ ಸೆಲ್ಫಿ ತೆಗೆಯುವಂತಿಲ್ಲ, ಅಜ್ಜಿ ಮನೆಗೆ ಹೋಗುವಂತಿಲ್ಲ, ಸಂಬಂಧಿಕರ ಮನೆಗೆ ಹೋಗುವಂತಿಲ್ಲ. ಏನು ಮಾಡುವುದು ಹೇಳಿ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ, ಅರೋಗ್ಯವಂತರಾಗಿದ್ದರೆ ಇನ್ನು ಬಹಳಷ್ಟು ಈದ್ ಸಂಭ್ರಮ ಹಿಂದಿನಂತೆ ಒಟ್ಟಿಗೆ ಸೇರಿ ಆಚರಿಸಬಹುದು.

ಆ ಶುಭಾಶಯ ಯಾರಿಗೆ ಶುಭ ಹೇಳುತ್ತೆ…?
ಈ ಬಾರಿಯ ಈದ್ ಆಚರಣೆ ಸ್ವಲ್ಪ ವಿಭಿನ್ನವಾಗಿ ಆಚರಿಸುವ. ಹೆಚ್ಚಿನವರು ವಾಟ್ಸಪ್’ನಲ್ಲಿ EID Mubarak to you and Your Fly ಅಂಥ ಮೆಸೇಜ್ ಕಳುಹಿಸುವ ಒಂದು ಅಭ್ಯಾಸ ರೂಡಿಯಲ್ಲಿಟ್ಟುಕೊಂದಿದ್ದಾರೆ, ಯಾರ ಮಾತು ಬಿಡಿ ನಾನೂ ಕೂಡ ಆ ರೀತಿ ಮಾಡುತ್ತೇನೆ ಆದರೆ ಆ ರೀತಿಯ ಮೆಸೇಜ್’ಗಳ ಮೂಲಕ ಶುಭ ಹಾರೈಸುವಾಗ ನಮ್ಮ ಭಾರ ಇಳಿಸುತ್ತಿರುವಂತೆ ಅನುಭವವಾಗುತ್ತದೆಯೇ ಹೊರೆತು ನಿಜವಾಗಲು ಶುಭಾಶಯವು ಅವರ ಮನಸ್ಸಿಗೆ ತಲುಪುತ್ತಾ….? ನೀವೇ ಪ್ರಶ್ನಿಸಿ ಆ ರೀತಿಯ ಶುಭಾಶಯ ಗ್ರೂಪ್’ಗಳಲ್ಲಿ ಮತ್ತು ಪರ್ಸನಲ್ ಆಗಿ ಎಷ್ಟೊಂದು ಕಳುಹಿಸುತ್ತಾರೆ, ನಾವೂ ಕೂಡ ಮನಸ್ಸಾದ್ರೆ ಹಾ ಅವನು ಮೆಸೇಜ್ ಮಾಡಿದ್ದಾನಲ್ಲ ಒಂದು ರಿಪ್ಲೈಯ್ ಮಾಡೋನ ಅಂಥ “Wish you the same” ಅಥವ ಅದೇ ರೀತಿಯಲ್ಲಿ ಪ್ರತಿಕ್ರಯಿಸುತ್ತೇವೆ.

ಹಲವರಿಗಂತೂ ಹೇಗಿದ್ದೀಯ ಅಂಥ ಕೇಳುವುದಕ್ಕೂ ಆಲಸ್ಯ. ಬಿಡಿ ಅದನ್ನೆಲ್ಲಾ ಬಿಟ್ಟು ಬಿಡೋನ. ಲಾಕ್ಡೌನ್’ನಿಂದ ಮಾಡಲಾಗದ ಕಾರ್ಯಗಳನ್ನೆಲ್ಲಾ ಬಿಟ್ಟು ಮನೆಯಲ್ಲಿದ್ದುಕೊಂಡು ಮಾಡುವಂತಹ ಹಲವಾರು ಕಾರ್ಯಗಳಿವೆ ಅದನ್ನು ಮಾಡೋನ. ಈದ್ ದಿನದಂದು ಮಾಡಬೇಕಾದ ಸುನ್ನತ್ತಾದ ಕಾರ್ಯಗಳನ್ನೆಲ್ಲಾ ಮಾಡೋನ, ಇನ್ನು ಸ್ನಾನ ನಮಾಝು ಹೀಗೆ ಎಲ್ಲಾ ವಿಶಯಗಳ ಬಗ್ಗೆ ನೀವು ಆನ್ಲೈನ್ ಕ್ಲಾಸ್’ನಲ್ಲಿ ಉಸ್ತಾದರು ವಿವರಿಸಿರುವುದನ್ನು ಕೇಳಿರಬಹುದು, ಅದರಂತೆ ಪಾಲಿಸೋನ.

ಇನ್ನು ಶುಭಾಶಯದ ವಿಚಾರ ಮರೆತು ಬಿಟ್ಟಿದ್ದೆ , ಈ ಬಾರಿ ನೇರ ಫೋನ್ ಕರೆ ಮಾಡಿ ಶುಭಾಶಯವನ್ನು ಕೋರುವ. ಸಂಭಂದಿಕರಿಗೆ, ಸ್ನೇಹಿತರಿಗೆ, ಬಾಲ್ಯ ಸ್ನೇಹಿತರಿಗೆ, ಅತ್ತೆ, ಮಾವ, ತಂಗಿ, ಅಣ್ಣ, ತಮ್ಮ, ನೆರೆಹೊರೆ ಅಂಥ ಸಾದ್ಯವಾದವರೆಲ್ಲರಿಗೂ ಕರೆ ಮಾಡಿ ಮಾತನಾಡೋನ. ಮುಂದಿನ ಈದ್’ಗೆ ನೀವು ಕರೆ ಮಾಡದೇ ಇದ್ದರೆ ಅವರೆ ಮಾಡುತ್ತಾರೆ.

ನೋಡಿ.ಹಾ ಅಂದಹಾಗೆ ನಿಮ್ಮೊಂದಿಗೆ ಶತ್ರುವಾಗಿದ್ದವರೊಂದಿಗೆ ರಮಳಾನ್ 27’ಕ್ಕಿಂತ ಮುಂಚೆ ಪರಸ್ಪರ ಕ್ಷಮಯಾಚನೆ ಕೇಳಿದ್ದೀರಲ್ಲ ಅವರಿಗೆ ಮರಿಯದೇ ಕರೆ ಮಾಡಿ, ದೇಹ ದೂರವಾದರೇನಾಯಿತು ಮನಸ್ಸು ಸೇರಲಿ. ಸಂತಸವನ್ನು ವ್ಯಕ್ತಪಡಿಸಿ, ದುಃಖ ಯಾರಿಗಿಲ್ಲ ಹೇಳಿ, ಕಷ್ಟ ಯಾರಿಗಿಲ್ಲ ಹೇಳಿ. ನಾವು ಪರಸ್ರರ ಧೈರ್ಯ ತುಂಬಬೇಕಾದ ಸಮಯವಿದು.

ಸಮಯ ಮೀರಿಲ್ಲ ಕತ್ತಲಾದ ನಂತರ ಬೆಳಕು ಬಂದೇ ಬರುತ್ತೆ. ಈ ದಿನಗಳೆಲ್ಲಾ ಹೋಗಿ ಒಂದು ಒಳ್ಳೆಯ ದಿನಗಳು ಬಂದೇ ಬರುತ್ತೆ ಆದರೆ ನೀವು ಆ ಒಳ್ಳೆಯ ದಿನಗಳನ್ನು ಅನುಭವಿಸಲು ತಯಾರಿ ನಡೆಸುತ್ತಿದ್ದೀರಿ ತಾನೆ….!?
ತಾಳ್ಮೆಯಿಂದ ಈ ಒಂದು ಜಗತ್ತಿಗೆ ಬೇಕಾದ ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ತಯಾರಾಗಿರಿ‌.
Finally, I wish all your effort make you the best.

Sorry, ಕೊನೆಗೆ ಈದ್ ಹಬ್ಬಕ್ಕೆ ವಾಟ್ಸಪ್’ನಲ್ಲಿ ಶುಭಾಶಯ ತಿಳಿಸುತ್ತಿಲ್ಲ ನೇರವಾಗಿ ಫೋನ್ ಕರೆ ಮಾಡುತ್ತೇನೆ, ನಾನು ಕರೆ ಮಾಡದೇ ಇದ್ದಲ್ಲಿ ನೀವು ಕರೆ ಮಾಡುತ್ತೀರ ಅಂಥ ಗೊತ್ತಿದೆ. ನಿಮ್ಗೂ ಕೂಡ ಕಾಲ್ ಫ್ರೀ ಇದಿಯಲ್ಲಾ, ನನ್ನ ಕರೆಯನ್ನೇ ಕಾಯಬೇಡಿ.

Waiting for your call….

✍️ ಇಂಝಮುಲ್ ಹಕ್ ಬಜ್ಪೆ

error: Content is protected !! Not allowed copy content from janadhvani.com