janadhvani

Kannada Online News Paper

ಕರೆನ್ಸಿಯ ಅವಹೇಳನ- ವಿದೇಶೀ ಪ್ರಜೆಯ ಬಂಧನ- ಭಾರೀ ದಂಡ

ದುಬೈ: ಯುಎಇ ಕರೆನ್ಸಿಯನ್ನು ಅವಹೇಳನ ಮಾಡಿದ ವಿದೇಶೀ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಆ ವೀಡಿಯೋ ಮೂಲಕ ಅವಹೇಳನ ನಡೆಸಲಾಗಿದೆ ಎಂದು ದುಬೈ ಸೈಬರ್ ಪೊಲೀಸರು ತಿಳಿಸಿದ್ದಾರೆ.

ಯುಎಇ ದಿರ್ಹಮ್ ಬಳಸಿ ಆರೋಪಿಯು ದೇಹವನ್ನು ತೊಳೆಯುವುದನ್ನು ವೀಡಿಯೊದಲ್ಲಿ ಚಿತ್ರಿಸಲಾಗಿದೆ. ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗಿದೆ.

ದೇಶ ಅಥವಾ ದೇಶೀಯ ಚಿಹ್ನೆಗಳನ್ನು ಅಪಹಾಸ್ಯ ಮಾಡಿದರೆ ಕಡಿಮೆ ಎಂದರೆ ಹತ್ತು ಲಕ್ಷ ದಿರ್ಹಂ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಯುಎಇಯಲ್ಲಿ ಕೋವಿಡ್ 19 ಭದ್ರತಾ ಕ್ರಮಗಳನ್ನು ಅಪಹಾಸ್ಯ ಮಾಡಿದವರ ವಿರುದ್ಧ ಕೈಗೊಂಡ ಕಾನೂನು ಕ್ರಮಗಳ ಬಗ್ಗೆ ಪೊಲೀಸರು ಆರೋಪಿಗಳ ಫೋಟೊ ಸಹಿತ ಈ ಹಿಂದೆ ವರದಿ ಪ್ರಕಟಿಸಿದ್ದರು.

ಜವಾಬ್ದಾರಿ ಇಲ್ಲದಂತೆ ವರ್ತಿಸುವ ಇಂತಹ ವ್ಯಕ್ತಿಗಳಿಗೆ ಕೆಲಸ ಸಿಗಬಾರದು. ಅದೇ ರೀತಿ ಅವರು ಸಮಾಜದಲ್ಲಿ ತಲೆ ಎತ್ತಿ ನಡೆಯಬಾರದು ಎನ್ನುವ ದಿಶೆಯಲ್ಲಿ ಇವರ ಮುಖ ತೋರ್ಪಡಿಸಿ ಫೋಟೊ ಪ್ರಕಟಿಸಲಾಗಿದೆ ಎಂದು ದುಬೈ ಪೊಲೀಸ್ ಅಧಿಕಾರಿ ಕರ್ನಲ್ ಸಯೀದ್ ಹಾಜಿರಿ ಹೇಳಿದರು.

error: Content is protected !! Not allowed copy content from janadhvani.com