janadhvani

Kannada Online News Paper

ಮುಸಫ್ಫಾದಲ್ಲಿ ಬೃಹತ್ ಕೋವಿಡ್ ತಪಾಸಣೆ ಕೇಂದ್ರ-ಸಾಮಾನ್ಯ ಕಾರ್ಮಿಕರಿಗೂ ಉಪಯುಕ್ತ

ಅಬುಧಾಬಿ: ಯುಎಇಯ ರಾಷ್ಟ್ರೀಯ ಕೋವಿಡ್ ತಪಾಸಣೆ ಕಾರ್ಯಕ್ರಮದ ಭಾಗವಾದ ಮುಸಫಾದಲ್ಲಿ ಸುಧಾರಿತ ಕೋವಿಡ್ ಪರೀಕ್ಷಾ ಕೇಂದ್ರ ಕಾರ್ಯಾಚರಿಸುತ್ತಿದೆ.

ಮುಸಫಾ ಅಲ್-ಮಸೂದ್‌ನಲ್ಲಿರುವ ವಿಪಿಎಸ್ ತಪಾಸಣಿ ಕೇಂದ್ರದಲ್ಲಿ ಸಾಮಾನ್ಯ ಕಾರ್ಮಿಕರು ಸೇರಿದಂತೆ ಸಾವಿರಾರು ಜನರು ಇದರ ಪ್ರಯೋಜನ ಪಡೆಯುತ್ತಾರೆ.

ಈ ಯೋಜನೆಯು ಯುಎಇ ಸರಕಾರದ ನಿರ್ದೇಶನದ ಮೇರೆಗೆ ಯುಎಇಯ ಎಲ್ಲಾ ನಾಗರಿಕರು ಮತ್ತು ನಿವಾಸಿಗಳಿಗೆ ಸುರಕ್ಷಿತ ಮತ್ತು ಉತ್ತಮ ತಪಾಸಣೆಯನ್ನು ಖಚಿತಪಡಿಸುತ್ತದೆ.

ವಿಪಿಎಸ್ ಹೆಲ್ತ್‌ಕೇರ್ ಸ್ಥಾಪಿಸಿದಂತಹ ಸ್ಕ್ರೀನಿಂಗ್ ಕೇಂದ್ರಗಳು ದೇಶದಲ್ಲಿ ಅತ್ಯುತ್ತಮವಾಗಿ ಮುಂದುವರಿಯುತ್ತವೆ ಎಂದು ಎಎಚ್‌ಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಹವಾಸ್ ಅಲ್-ಸಾದಿದ್ ಹೇಳಿದ್ದಾರೆ.