ಮಂಗಳೂರು : ಕೋವಿಡ್ 19 ನಿಗ್ರಹ ಮುಂಜಾಗ್ರತಾ ಕ್ರಮಗಳ ಜಾರಿ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಆನ್ಲೈನ್ ಟ್ಯಾಕ್ಸಿ ಚಾಲಕರಿಗೆ ರೇಷನ್ ಮತ್ತು ತರಕಾರಿ ಕಿಟ್ ಕೊಡುವ ಕಾರ್ಯಕ್ರಮವನ್ನು ದ.ಕ ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ನೇತೃತ್ವದಲ್ಲಿ ಇಂದು ನಗರದ ಎಮ್ಮೆಕೆರೆ ಮೈದಾನದಲ್ಲಿ ನಡೆಯಿತು.
ಸುಮಾರು 150 ಮಂದಿ ಚಾಲಕರಿಗೆ 2 ಲಕ್ಷ ರೂಪಾಯಿ ವೆಚ್ಚದಲ್ಲಿ ರೇಷನ್ ಮತ್ತು ತರಕಾರಿ ಕಿಟ್ ವಿತರಣೆ ಮಾಡಲಾಗಿದೆ ಮುಂದಿನ ಹಂತದಲ್ಲಿ 100 ಕಿಟ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದ ಬಿ.ಕೆ ಇಮ್ತಿಯಾಝ್ ಅವರು ಸರಕಾರ ಕೂಡ ಟ್ಯಾಕ್ಸಿ ಚಾಲಕರಿಗೆ ಇನ್ನೂ ಹೆಚ್ಚಿನ ನೆರವು ಘೋಷಿಸಬೇಕೆಂದು ಆಗ್ರಹಿಸಿದರು.
ನೌಶೀರ್ ಮದನಿನಗರ, ಸಾದಿಕ್ ಎಂಕೆ, ಅಲ್ತಾಫ್ ಉಳ್ಳಾಲ, ಸಂಘದ ಉಪಾಧ್ಯಕ್ಷ :ಮುನವ್ವರ್ ಕುತ್ತಾರ್ ಸಹಕರಿಸಿದ್ದರು. ಸಂಘದ ಪ್ರಮುಖರಾದ ಶಾಕಿರ್ ಕಣ್ಣೂರ್, ಕಲೀಮ್ ಮದನಿ, ಇಂತಿಯಾಜ್ ಮಜಲತೋಟ, ವಾಜಿದ್ ಪಾಂಡೇಶ್ವರ, ವಿಲ್ಸನ್ ಕಾವೂರ್, ನೆಲ್ಸನ್ ಕೂಳೂರ್, ಅಬ್ದುಲ್ ಸಮದ್, ಆಕಾಶ್ ಶೆಟ್ಟಿ, ಪವನ್ ಕದ್ರಿ, ಕಿರಣ್ ಲಾಲ್ ಬಾಗ್, ಹೇಮಂತ್ ಮುಂತಾದವರು ಉಪಸ್ಥಿತರಿದ್ದರು.
ತುಂಬಾ ಧನ್ಯವಾದಗಳು
Thank you my all friends
Good thank yo D.K union