ದೋಹಾ: ಕೋವಿಡ್ ವಿರೋಧಿ ಚಟುವಟಿಕೆಗಳಿಂದಾಗಿ ಮುಚ್ಚಲ್ಪಟ್ಟಿದ್ದ ಖತರ್‌ನ ಹಣ ವಿನಿಮಯ ಕೇಂದ್ರಗಳು ಮತ್ತೆ ತೆರೆದು ಕಾರ್ಯಾಚರಣೆ ಆರಂಭಿಸಿದ್ದು, ಕಟ್ಟುನಿಟ್ಟಾದ ಕೋವಿಡ್ ಮುನ್ನೆಚ್ಚರಿಕೆ ಸೂಚನೆಗಳನ್ನು ಅನುಸರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕೆಲಸದ ಸಮಯ ಎಂಟು ಗಂಟೆಗಳಾಗಿದ್ದು, ಕೇಂದ್ರಗಳಿಗೆ ಭೇಟಿ ನೀಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಬೇಕು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸೀಮಿತ ಸಂಖ್ಯೆಯ ಜನರನ್ನು ಮಾತ್ರ ಒಂದು ಬಾರಿ ಪ್ರವೇಶಿಸಲು ಅನುವು ಮಾಡಿ ಕೊಡಲಾಗುತ್ತದೆ.
ಜನರಿಗೆ ಸಂಸ್ಥೆಗಳ ಮುಂದೆ ಒಟ್ಟು ಸೇರಲು ಅವಕಾಶವಿರುವುದಿಲ್ಲ ಇದಲ್ಲದೆ, ಆರೋಗ್ಯ ಸಚಿವಾಲಯವು ನೀಡಿದ ವಿವಿಧ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಸೂಚನೆಗಳನ್ನು ಸರಿಯಾಗಿ ಪಾಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕಠಿಣ ತಪಾಸಣೆ ನಡೆಯಲಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯ ತಿಳಿಸಿದೆ.