janadhvani

Kannada Online News Paper

ಕೆಸಿಎಫ್ ಸಹಭಾಗಿತ್ವದಲ್ಲಿ ಕ್ವಾರೈಂಟೇನ್: ದಾರುಲ್ ಇರ್ಶಾದ್,ಅಲ್ ಮದೀನಾ ಸಜ್ಜು

ಮಂಗಳೂರು: ಅನಿವಾಸಿ ಕನ್ನಡಿಗರ ತಾಯ್ನಾಡು ಯಾತ್ರೆಯ ಕ್ವಾರೈಂಟೇನ್ ವ್ಯವಸ್ಥೆಗೆ ದಾರುಲ್ ಇರ್ಶಾದ್,ಮಾಣಿ ಮತ್ತು ಅಲ್ ಮದೀನಾ ಮಂಜನಾಡಿ, ಸಂಸ್ಥೆಗಳನ್ನು ಜಿಲ್ಲಾ ಡಳಿತ ಆಯ್ಕೆ ಮಾಡಿರುತ್ತದೆ.

ವಿದೇಶದಲ್ಲಿ ಸಂಕಷ್ಟ ಎದುರಿಸುತ್ತಿರುವ ಅನಿವಾಸಿ ಕನ್ನಡಿಗರ ಸ್ವದೇಶ ಯಾತ್ರೆಗೆ ಕೇಂದ್ರ ಸರಕಾರ ಹಸಿರು ನಿಶಾನೆ ನೀಡಿದ್ದರೂ ಕ್ವಾರೆಂಟೈನ್ ವ್ಯವಸ್ಥೆಗಳನ್ನು ಸಜ್ಜುಗೊಳಿಸಲು ಆಯಾ ರಾಜ್ಯ ಸರಕಾರಕ್ಕೆ ಜವಾಬ್ದಾರಿ ನೀಡಿತ್ತು. ಹೋಟೆಲ್ ಗಳನ್ನು ಬುಕ್ ಮಾಡಿ ಅದರ ಖರ್ಚು ವೆಚ್ಚಗಳನ್ನು ಯಾತ್ರಾರ್ಥಿಗಳು ನೀಡಬೇಕೆಂದು ರಾಜ್ಯ ಸರಕಾರ ತಿಳಿಸಿದಾಗ ಅನಿವಾಸಿಗಳಿಗೆ ಇದು ತಲೆ ದೊಡ್ಡ ನೋವಾಗಿ ಪರಿಣಮಿಸಿತ್ತು.

ಈ ಸಮಸ್ಯೆಯನ್ನು ಪರಿಗಣಿಸಿ ಕರ್ನಾಟಕ ಕಲ್ಚರಲ್ ಫೌಂಡೇಷನ್ ಸಹಭಾಗಿತ್ವದಲ್ಲಿ ಊರಿನಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾಸಂಸ್ಥೆಗಳ ಕಟ್ಟಡಗಳನ್ನು ನೀಡಲು ಸಿದ್ಧವಿದೆ ಅದನ್ನು ಕ್ವಾರೆಂಟೈನ್ ವ್ಯವಸ್ಥೆಗಳನ್ನಾಗಿ ಬಳಸಿಕೊಳ್ಳಬೇಕೆಂದು ಮುಖ್ಯಮಂತ್ರಿಯವರಿಗೂ ಜಿಲ್ಲಾಧಿಕಾರಿಯವರಿಗೂ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೂ ಮನವಿ ಮಾಡಿ ಕೊಳ್ಳಲಾಗಿತ್ತು.

ಕರ್ನಾಟಕದ ಪ್ರಖ್ಯಾತ ಧಾರ್ಮಿಕ ವಿದ್ಯಾಸಂಸ್ಥೆ ದಾರುಲ್ ಇರ್ಷಾದ್ ಎಜುಕೇಶನಲ್ ಸೆಂಟರ್ ಮಾಣಿ ಹಾಗು ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಈ ಎರಡೂ ಸಂಸ್ಥೆಗಳು ಸಕಲ ಸಿದ್ದತೆಗಳೊಂದಿಗೆ ಅನಿವಾಸಿ ಕನ್ನಡಿಗರನ್ನು ಸ್ವೀಕರಿಸಲು ಸಜ್ಜಾಗಿದೆ. ಈಗಾಗಲೇ ಯಾತ್ರೆ ಅನುಮತಿ ಪಡೆದ ಅನಿವಾಸಿ ಕನ್ನಡಿಗರು ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದೆಂದು ಕರ್ನಾಟಕ ಕಲ್ಚರಲ್ ಫೌಂಡೇಷನ್ ಯುಎಇ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಸ್ಥೆಗಳಲ್ಲಿ ಕಾರಂಟೈನ್ ನೊಂದಿಗೆ ಊಟ ವಸತಿ ವ್ಯವಸ್ಥೆಯು ಸಂಪೂರ್ಣ ಉಚಿತವಾಗಿರುತ್ತದೆ. ಯಾತ್ರಾರ್ಥಿಗಳ ಇಫ್ತಾರ್ ಮತ್ತು ಸಹರಿ ಉಚಿತವಾಗಿ ಲಭಿಸಲಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ಜಿಲ್ಲಾ ಡಳಿತ ಸಹಕಾರದಲ್ಲಿ ಆರೋಗ್ಯ ಕಾರ್ಯಕರ್ತರೊಂದಿಗೆ ಸಂಸ್ಥೆಯ ಸ್ವಯಂ ಸೇವಕರಾಗಿ ಎಸ್.ವೈ.ಎಸ್ ಟೀಂ ಇಸಾಬ ಮತ್ತು ಎಸ್.ಎಸ್.ಎಫ್ ಕ್ಯೂ ಟೀಂ ಕಾರ್ಯ ನಿರ್ವಹಿಸಲಿದೆ.

ಯುಎಇಯಲ್ಲಿ ಹೆಚ್ಚಿನ ಮಾಹಿತಿಗಾಗಿ ಕೆಸಿಎಫ್ ರಾಷ್ಟ್ರೀಯ ಪಬ್ಲಿಕೇಷನ್ ವಿಭಾಗದ ಅದ್ಯಕ್ಷರಾದ ಕರೀಂ ಮುಸ್ಲಿಯಾರ್ ಶಾರ್ಜಾ +971555318631 ರವರನ್ನು ಹಾಗೂ ಅಲ್ ಮದೀನಾ ಮಂಜನಾಡಿ ಬಗ್ಗೆ ಜಿ.ಎಂ ಮಹಮ್ಮದ್ ಕಾಮಿಲ್ ಸಖಾಫಿ +919448409049 ಮತ್ತು ದಾರುಲ್ ಇರ್ಶಾದ್ ಮಾಣಿ ಬಗ್ಗೆ ಹಮೀದ್ ಬಜ್ಪೆ +919591531313 ರವರನ್ನು ಸಂಪರ್ಕಿಸಲು ಕೆಸಿಎಫ್ ಯುಎಇ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com