ಸುರತ್ಕಲ್: ಕೋವಿಡ್ 19 ಕಾರಣದಿಂದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಹೋಗಲಾಗದೆ ಮನೆಯಲ್ಲಿಯೇ ಉಳಿಯುವಂತಾಗಿದೆ.
ಕಳೆದ ಹಲವು ದಿನಗಳಿಂದ ಲೊಕ್ಡೌನ್ ಆಗಿ ,ಕೆಲವು ದಿನನಿತ್ಯದ ಆಹಾರ ಸಾಮಗ್ರಿಗಳ ಕೊರತೆ ಅನುಭವಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.ಮೊನ್ನೆಯಷ್ಟೇ ಲೊಕ್ಡೌನ್ ಸಡಿಲಿಕೆ ಕಂಡರೂ ,ದೇಶದೆಲ್ಲೆಡೆ ಏರಿಕೆ ಕಾಣುತ್ತಿರುವ ಸೋಂಕಿತರ ಸಂಖ್ಯೆಯಿಂದ ಎಲ್ಲರಿಗೂ ಆತಂಕ ಇನ್ನು ಮನಸ್ಸಲ್ಲೆ ಉಳಿದಿದೆ.
ಹೀಗೆ ಹಲವು ಕಾರಣಗಳಿಂದ ಸಂಕಷ್ಟಕ್ಕೆ ಒಳಗಾದ ಅರ್ಹ ವ್ಯಕ್ತಿಗಳಿಗೆ ಆಹಾರ ಸಾಮಗ್ರಿಗಳ ಕಿಟ್ ನೀಡುವ ಕಾರ್ಯಕ್ರಮ ದೇಶದಲ್ಲಿ ಹಾಗು ವಿದೇಶದಲ್ಲಿ ನಡೆಯುತ್ತಿದ್ದು ,ವಿಶಿಷ್ಟ ಶೈಲಿಯ ಫಲಾಹಾರ (Fruits) ಕಿಟ್
ಕೊಡುವ ಮೂಲಕ ಮುಕ್ಕ Zimrain ಸಹೋದರರು ಸಾಕ್ಷಿಯಾಗಿದ್ದಾರೆ.
ಊರಲ್ಲಿರುವ ಹಾಗು ವಿದೇಶದಲ್ಲಿರುವ ಸುಮಾರು 30 ಮಂದಿ ಸಹೋದರರ ಬಳಗ ಸರಿಸುಮಾರು 40,000 ಬೆಲೆಯ ವಿವಿಧ ಬಗೆಯ ಫಲಾಹಾರಗಳ ಕಿಟ್ ನ್ನು ಮುಕ್ಕ ಜಮಾತ್ ನ ಸುಮಾರು 200 ಮನೆಗಳಿಗೆ ,ಇತರ ಅರ್ಹ 50 ವ್ಯಕ್ತಿಗಳಿಗೆ ಹಾಗು 20 ಕಿಟ್ ಮುಲ್ಕಿ ಯ ಆಶ್ರಮಕ್ಕೆ ಊರಲ್ಲಿರುವ ಸಂಘ ಸಂಸ್ಥೆ ,ಹಾಗು ಜಮಾತ್ ನ ಸಹೋದರರ ಸಹಕಾರದೊಂದಿಗೆ ಈ ಪುಣ್ಯವೇರಿದ ರಂಜಾನ್ ಮಾಸದಲ್ಲಿ ವಿತರಿಸಲಾಯಿತು.
Masha Allah great job did.