ಬೆಂಗಳೂರು: ಸಾರ್ವಜನಿಕರು ಮತ್ತು ಮಾಧ್ಯಮಗಳು, ಜಗತ್ತನ್ನೇ ಭಯಭೀತರಾಗಿಸಿರುವ ಕೋವಿಡ್ – 19 ನಿಂದ ದೇಶವು ಸಂಪೂರ್ಣ ಸ್ತಬ್ದ ಆದ ಸಮಯದಲ್ಲಿ ಕೇಂದ್ರ ಸರ್ಕಾರವು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಪ್ರಗತಿಪರ ಆಕ್ಟಿವಿಷ್ಟ್‌ಗಳ ಮೇಲೆ ಯುಎಪಿಎ ಯಂತಹ ಕರಾಳ ಕ್ರೂರ ಕಾನೂನನ್ನು ಹೇರಿ ಕಿರುಕುಳ ನೀಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಖಂಡನಾರ್ಹವಾಗಿದೆ.
ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಮರೆಯಲ್ಲಿ ಕೇಂದ್ರ ಸರ್ಕಾರ ದೆಹಲಿ ಪೊಲೀಸರು ಮತ್ತು ವಿವಿಧ ತನಿಖಾ ಸಂಸ್ಥೆಗಳನ್ನು ಬಳಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಬೇಟೆಯನ್ನು ನಡೆಸುತ್ತಿದೆ.
ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ ಜಾಮಿಯಾ ಸಮನ್ವಯ ಸಮಿತಿಯ ಮಾಧ್ಯಮ ಸಂಯೋಜಕ ಸಫೂರಾ ಝರ್ಗರ್, ಸಮಿತಿ ಸದಸ್ಯ ಮೀರನ್ ಹೈದರ್ ಮತ್ತು ಜೆಎನ್‌ಯು ಮಾಜಿ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ವಿರುದ್ಧ ಯುಎಪಿಎ ಹೇರಿರುವುದರ ಉದ್ದೇಶ, ಪ್ರತಿಭಟನಾಕಾರರಲ್ಲಿ ಭಯವನ್ನು ಹುಟ್ಟುಹಾಕುವುದು ಮತ್ತು ಸರ್ಕಾರದ ತಪ್ಪು ನೀತಿಗಳ ವಿರುದ್ಧ ಪ್ರತಿಭಟನೆಗಳನ್ನು ನಿಗ್ರಹಿಸುವುದಾಗಿದೆ.
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿಫಾಉರ್ರಹ್ಮಾನ್, ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ಮತ್ತು ಕಾಶ್ಮೀರಿ ಫೋಟೊ ಜರ್ನಲಿಸ್ಟ್ ಮಸ್ರತ್ ಝಹ್ರಾ ಅವರ ಮೇಲೂ ಯುಎಪಿಎ ಇದೇ ಉದ್ದೇಶದಿಂದ ಹೇರಲಾಗಿದೆ ಎಂದು ಶಂಕಿಸಬೇಕಿದೆ.
2019 ರ ಡಿಸೆಂಬರ್ 15 ರಂದು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಕ್ರೂರವಾಗಿ ಹಲ್ಲೆ ಮಾಡಿದ್ದರು, ಅದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಮತ್ತೆ ಬೇಟೆಯಾಡುವುದು ಬಹಳ ಕಳವಳಕಾರಿಯಾಗಿದೆ.
ದೆಹಲಿ ಗಲಭೆಯ ಹಿನ್ನೆಲೆಯಲ್ಲಿ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್ ವಿರುದ್ಧ ಯುಎಪಿಎ ಹೇರಿದಾಗಲೂ, ಮುಸ್ಲಿಮರ ಮೇಲೆ ಹಲ್ಲೆ ನಡೆಸಲು ಜನಸಮೂಹವನ್ನು ಪ್ರಚೋದಿಸಿದ ಅನುರಾಗ್ ಠಾಕೂರ್ ಮತ್ತು ಕಪಿಲ್ ಮಿಶ್ರಾ ರವರಂತಹ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಬಲವಾದ ಸಂಶಯಗಳನ್ನು ಹುಟ್ಟಿಸಿದೆ.
ದೆಹಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸಫರುಲ್ ಇಸ್ಲಾಂ ಖಾನ್ ಮಾಡಿದ ಟ್ವೀಟ್‌ಗಾಗಿ ದೇಶದ್ರೋಹದ ಆರೋಪ ಹೊರಿಸಲಾಗಿರುವುದು ಪ್ರತಿಭಟನಾ ಸ್ವರಗಳನ್ನು ಇಲ್ಲವಾಗಿಸುವ ಭಾಗವಾಗಿದೆ ಎಂಬುದು ನಿಸ್ಸಂದೇಹವಾಗಿದೆ.
ಕೇಂದ್ರ ಸರ್ಕಾರವು, ತನ್ನ ಸಂಸದರು ಮತ್ತು ಉತ್ತರ ಪ್ರದೇಶ ಸೇರಿದಂತೆ ಇರುವ ಬಿಜೆಪಿ ಸರ್ಕಾರಗಳು ಅಲ್ಪಸಂಖ್ಯಾತ ವಿರೋಧಿ ಟೀಕೆಗಳು ಮತ್ತು ಕ್ರಮಗಳನ್ನು ಕೊನೆಗೊಳಿಸಬೇಕು ಮತ್ತು ಲಾಕ್‌ಡೌನ್ ಮರೆಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ವಿವಿಧ ಏಜೆನ್ಸಿಗಳು ನಡೆಸುತ್ತಿರುವ ಬೇಟೆಯನ್ನು ನಿಲ್ಲಿಸಬೇಕು. ಸರ್ಕಾರಕ್ಕೆ ಹಾಗೆ ಮಾಡಲು ಇಷ್ಟವಿಲ್ಲದಿದ್ದರೆ, ಈ ವಿಷಯದ ಮಹತ್ವವನ್ನು ಅರಿತು ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ತುರ್ತು ಹಸ್ತಕ್ಷೇಪಕ್ಕೆ ಮುಂದಾಗಬೇಕು ಎಂದು ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ಹಾಗೂ ವಿಸ್ಡಂ ವಿಂಗ್ ಅಗ್ರಹಿಸಿದೆ.
Campus & Wisdom Wing
SSF Karnataka