janadhvani

Kannada Online News Paper

ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅನುಮತಿ ಕೋರಿ ಮನವಿ

ಚಿಕ್ಕಮಗಳೂರು: ಗ್ರೀನ್ ಝೋನ್‌ನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಲಾಕ್‌ ಡೌನ್ ಸಡಿಲಗೊಂಡಿದ್ದು,ಅಂಗಡಿ ಮುಂಗಟ್ಟುಗಳು ತೆರೆದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.

ರಮಳಾನ್ ತಿಂಗಳು ಚಾಲ್ತಿಯಲ್ಲಿರುವುದರಿಂದ ಆರಾಧನೆಗಳಿಗಾಗಿ ಪ್ರಾರ್ಥನಾ ಮಂದಿರಗಳನ್ನು ತೆರೆಯಲಿಕ್ಕೆ ಅನುಮತಿ ನೀಡಬೇಕೆಂದು,

ಕರ್ನಾಟಕ ಮುಸ್ಲಿಂ ಜಮಾಅತ್ ಚಿಕ್ಕಮಗಳೂರು ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಸುನ್ನೀ ಸಂಘಟನೆಗಳ ಹಿರಿಯ ಮುಖಂಡ, ಯೂಸುಫ್ ಹಾಜಿ ಹಾಗೂ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ, ಶಾಹಿದ್ ರಝ್ವಿ ಯವರ ನಿಯೋಗವು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರೀಷ್ ಪಾಂಡೆ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಅದೇ ರೀತಿ ಈವರೆಗೆ ಕೋವಿಡ್ 19 ಕೊರೋನಾ ವೈರಸ್ ಜಿಲ್ಲೆಯಲ್ಲಿ ಹರಡುವುದನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯವರಿಗೆ ಅಭಿನಂದನೆಗಳನ್ನೂ ಸಲ್ಲಿಸಲಾಯಿತು.

error: Content is protected !! Not allowed copy content from janadhvani.com