janadhvani

Kannada Online News Paper

ಅನಿವಾಸಿಗಳು ತವರಿಗೆ: ಧರ್ಮಾಂದತೆಯ ಮಾಧ್ಯಮ ಕಣ್ಣುಗಳು ನಿಮ್ಮನ್ನೇ ದಿಟ್ಚಿಸುತ್ತಿದೆ- ನೆನಪಿರಲಿ!

ಎರಡು ಮೂರು ತಿಂಗಳಿನಿಂದ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದೊಂದಿಗೆ ಮಾಡಿದ ನಿರಂತರ ಒತ್ತಡದ ಫಲವಾಗಿ ಕೋವಿಡ್-19 ನಿಂದ ಸಂಕಷ್ಟಕ್ಕೊಳಗಾದ ಅನಿವಾಸಿಗಳನ್ನು ಊರಿಗೆ ತಲುಪಿಸುವ ವ್ಯವಸ್ಥೆಗೆ ಹಸಿರು ನಿಶಾನೆ ಲಭಿಸಿದೆ.

ಊರಿನ ದಾರಿ ಹುಡುಕಿಕೊಂಡು ಕಣ್ಣೀರು ಹರಿಸುತ್ತಿದ್ದ ಅದೆಷ್ಟೋ ಅನಿವಾಸಿ ಭಾರತೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಮಕ್ಕಳ ಅವಸ್ಥೆಯನ್ನು ನೆನೆದು ಕಣ್ಣೀರಿನಿಂದ ಪ್ರಾರ್ಥಿಸುತ್ತಿದ್ದ ತಂದೆ ತಾಯಿ, ಸಹೋದರ ಸಹೋದರಿಯರು ಪತ್ನಿ ಮಕ್ಕಳು ಸಂತೋಷದಿಂದ ಸ್ವಿಕರಿಸಲು ರೆಡಿಯಾಗಿದ್ದಾರೆ.

ಕೋವಿಡ್ ಟೆಸ್ಟ್ ನಡೆಸಿ ನೆಗೆಟಿವ್ ರಿಸಲ್ಟ್ ಬಂದ ಅನಿವಾಸಿಗಳು ಮಾತ್ರ ಈ ಯಾತ್ರ ಸೌಕರ್ಯವನ್ನು ಉಪಯೋಗಿಸಬೇಕು. ಕಾರಣ, ಇದರ ಹಿಂದೆ ದೊಡ್ಡ ವಂಚನೆಯ ಜಾಲವೊಂದು ಸಕ್ರೀಯವಾಗಿದೆ. ಆ ವಂಚನೆಗೆ ಯಾವುದೇ ಯಾತ್ರಾರ್ಥಿಗಳು ವಂಚಿತರಾಗಬಾರದು.

ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಯಾತ್ರೆ ಮಾಡಿದರೆ ಅದರಿಂದ ರೋಗ ಹರಡುತ್ತದೆ ಎಂಬ ವಿಷಯದಲ್ಲಿ ಯಾರಿಗೂ ಸಂಶಯವಿಲ್ಲ ತಾನೇ..?! ಅದಕ್ಕಾಗಿ ಎಲ್ಲಾ ರೀತಿರ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲೇಬೇಕು.

ವಿಶ್ವವೇ ಒಟ್ಟಾಗಿ ಕೋರೋಣ ವೈರಸ್ ನ್ನು ಒಂದು ಸಾಂಕ್ರಾಮಿಕ ರೋಗವಾಗಿ ಪರಿಗಣಿಸಿ ನಿಯಂತ್ರಣಕ್ಕಾಗಿ ಹೋರಾಡುತ್ತಿದ್ದರೂ ಭಾರತದಲ್ಲಿ ಮಾತ್ರ ಧರ್ಮಾಂದತೆ ತುಂಬಿದ ಮಾಧ್ಯಮಗಳ ಹಾವಳಿಯಿಂದ ಅದನ್ನು ಧರ್ಮದ ತಲೆಗೆ ಎತ್ತಿ ಕಟ್ಟುವ ವ್ಯರ್ಥ ಶ್ರಮ ನಡೆಯುತ್ತಲೇ ಇದೆ.

ರೋಗದಲ್ಲೂ ಧರ್ಮ ಹುಡುಕುವ ಕೋಮು ಮಾಧ್ಯಮಗಳ ನೀಚ ಪ್ರವೃತ್ತಿಯ ಕುರಿತು ನಾವು ಅರಿಯದವರಾಗಬಾರದು. ಗಲ್ಫ್ ರಾಷ್ಟ್ರಗಳಿಂದ ಬರುವ ಅನಿವಾಸಿಗಳಲ್ಲಿ ಹೆಚ್ಚಿನವರು ಮುಸ್ಲಿಮರೇ ಆಗಿರುವ ಕಾರಣ ಏರ್‌ಪೋರ್ಟ್ಗಳಂತೂ ನಕಲಿ ಕ್ಯಾಮಾರಾಗಳಿಂದ ತುಂಬಿರಬಹುದು.

ಅನಿವಾಸಿಗಳ ಕುರಿತು ಅತೀ ಹೆಚ್ಚು ರೋಗ ಹರಡುವವರೆಂದು ಜನರಲ್ಲೀ ಭೀತಿ ಸೃಷ್ಟಿಸಿ ಅದರ ಮೂಲಕವಾದರೂ ಊರಿನ ಯಾತ್ರಾ ಸೌಕರ್ಯವನ್ನು ರದ್ದು ಪಡಿಸುವ ಮಾಧ್ಯಮಗಳ ಕುತಂತ್ರದ ಕುರಿತು ನಾವು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. “ನಾನು ತಲುಪಿದ್ದೇನೆ; ಇನ್ನೇನಾದರೂ ನನಗೇನು” ಎಂಬ ಸ್ವಾರ್ಥ ಚಿಂತನೆಗೆ ಬಲಿಯಾಗದೆ, ನನ್ನಂತೆ ಸಂಕಷ್ಟಕ್ಕೊಳಗಾದ ಇನ್ನೂ ಹಲವಾರು ಅನಿವಾಸಿಗಳು ಊರಿಗೆ ಬರಲಿದ್ದಾರೆ ಎಂಬ ಸಾಮಾನ್ಯ ಜ್ಞಾನ ಪ್ರತಿಯೊಬ್ಬರಲ್ಲೂ ಇರಬೇಕು.

ಅರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಅಸಹಕಾರ ಮನೋಭಾವ ತಾಳದೆ ಎಲ್ಲಾ ರೀತಿಯಲ್ಲೂ ಸ್ಪಂದನೆ ಅತ್ಯಗತ್ಯವಾಗಿರುತ್ತದೆ.

ಹಲವಾರು ಕಷ್ಟ ನಷ್ಟ ಹಸಿವು ಯಾತನೆ ಸಾವು ನೋವುಗಳನ್ನು ಕಣ್ಣ ಮುಂದೆಯೇ ಅನುಭವಿಸಿದ ಅನಿವಾಸಿಗಳು ಊರಿಗೆ ತಲುಪಿದಾಗ ಅವರನ್ನು ಭಯೋತ್ಪಕರಂತೆ ಚಿತ್ರೀಕರಿಸಲು ಮಾಧ್ಯಮಗಳ ಧರ್ಮಾಂದತೆಯ ಕ್ಯಾಮರಾ ಕಣ್ಣುಗಳು ನಿಮ್ಮ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಿಕೊಳ್ಳಿ. ಸಾಧ್ಯವಾದಷ್ಟು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸರ್ವರಿಗೂ ಮಾದರಿಯಾಗೋಣ.

Nizzu4ever
ಉರುವಾಲು ಪದವು

error: Content is protected !! Not allowed copy content from janadhvani.com