ಶಾರ್ಜಾ: ಅಂಗಡಿಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳನ್ನು ತೆರೆಯಲು ಆರ್ಥಿಕ ಅಭಿವೃದ್ಧಿ ಸಚಿವಾಲಯ ಅನುಮೋದನೆ ನೀಡಿದ್ದು, ನಿಯಂತ್ರಣಗಳನ್ನು ಪಾಲಿಸಿ ರವಿವಾರದಿಂದ ತೆರೆಯ ಬಹುದಾಗಿದೆ.
ಶಾಪಿಂಗ್ ಮಾಲ್‌ಗಳು, ಸಲೂನ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ಎಲ್ಲಾ ವಾಣಿಜ್ಯ ಸಂಸ್ಥೆಗಳನ್ನು ತೆರೆಯಬಹುದಾಗಿದ್ದು, ವಾಣಿಜ್ಯ ಕೇಂದ್ರಗಳು ಮಧ್ಯಾಹ್ನ 12 ರಿಂದ ರಾತ್ರಿ 9 ರವರೆಗೆ ತೆರೆಯಲಿವೆ. ಆದರೆ ರೆಸ್ಟೋರೆಂಟ್‌ಗಳು ಮತ್ತು ಔಷಧಾಲಯಗಳು ಪೂರ್ಣ ಸಮಯ ತೆರೆದಿರಬಹುದು. ನಿಯಂತ್ರಣವನ್ನು ಪಾಲಿಸಲು ವಿಫಲವಾದರೆ ಕ್ರಮಕೈಗೊಳ್ಳಲಾಗುತ್ತದೆ. ಸಂಸ್ಥೆಗಳಲ್ಲಿ ಶೇ. 30ಕ್ಕಿಂತ ಹೆಚ್ಚಿನ ಕೆಲಸಗಾರರು ಇರಬಾರದು. ಕೆಲಸಗಾರರು ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಬೇಕು.
ಯಾವುದೇ ದಟ್ಟಣೆಯ ಮಾರಾಟ ಇರಬಾರದು. ಎಲ್ಲೆಡೆ ಇಲೆಕ್ಟ್ರಾನಿಕ್ ಗೇಟ್‌ವೇ ಇರಬೇಕು. ಕ್ರಿಮಿನಾಶಕ ವಿಧಾನವನ್ನು ನಿರ್ವಹಿಸಬೇಕು. 60 ವರ್ಷಕ್ಕಿಂತ ಮೇಲ್ಪಟ್ಟ ಯಾರನ್ನೂ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ರೆಸ್ಟೋರೆಂಟ್‌ಗಳು ಮತ್ತು ಸಲೂನ್‌ಗಳು ಈ ಹಿಂದೆ ನೀಡಿದ ಸೂಚನೆಗಳೊಂದಿಗೆ ಕಾರ್ಯನಿರ್ವಹಿಸಬೇಕು.