ಉಪ್ಪಳ: ಇಲ್ಲಿನ ಮೊಗರ್ ಎಂಬಲ್ಲಿ ರಂಜಾನ್ ಉಪವಾಸ ಪ್ರಯುಕ್ತ ಅರ್ಹ 55 ಕುಟುಂಬಕ್ಕೆ ಖಿದ್ಮತುಲ್ ಇಸ್ಲಾಂ ಫೌಂಡೇಶನ್ ವತಿಯಿಂದ ದಿನಾಂಕ 1.05.2020 ರಂದು ಕುಞಮೊನು ಚೇರಾಲ್, ಸತ್ತಾರ್ ಹಾಜಿ ಮಾಕಾಳಿ ಹಾಗು ಅಶ್ರಫ್ ಚೇಡಿ ಇವರ ಸಾರಥ್ಯದಲ್ಲಿ ರಂಜಾನ್ ಕಿಟ್ ವಿತರಿಸಲಾಯಿತು.
ಎಪ್ರೀಲ್ ಮೊದಲ ವಾರದಲ್ಲಿ ಕೋವಿಡ್ 19 ಕೊರೋನಾ ಲಾಕ್ ಡೌನ್ ನಿಮಿತ್ತ ನಾಡಿನ ಮುಸ್ಲಿಂ ಹಾಗೂ ಇತರ ಧರ್ಮ ಬಾಂಧವರನ್ನು ಒಳಗೊಂಡು
60 ಕಿಟ್ ವಿತರಣೆ ಖಿದ್ಮತುಲ್ ಇಸ್ಲಾಂ ಫೌಂಡೇಶನ್ ವತಿಯಿಂದ ನಡೆದಿತ್ತು.
ರಾಜ್ಯಾದ್ಯಂತ ಕೋವಿಡ್ 19 ಕೊರೋನಾ ಲಾಕ್ ಡೌನ್ ನಡುವೆಯು ಕಿಟ್ ಶೇಕರಣೆಗೆ ಸಂಸ್ಥೆಯ ಹಲವು ಕಾರ್ಯನಿರ್ವಾಹಕರು ಮುಂದೆ ಬಂದು ಸಾಥ್ ನೀಡಿದರು. ಇದರಲ್ಲಿ ವಿಶೇಷವಾಗಿ MCF ಮಂಗಳೂರು ಚಾರಿಟಿ ಫೋರಮ್ (ರಿ) ಸಂಸ್ಥೆಯು 15 ಕಿಟ್ ನೀಡುವುದರೊಂದಿಗೆ ನಮ್ಮ ಮುಂದಿದ್ದ ಬೇಡಿಕೆಯನ್ನು ಪೂರ್ಣಗೊಳಿಸಿತು.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಕರಿಸಿದ ಎಲ್ಲರಿಗೂ ಖಿದ್ಮತುಲ್ ಇಸ್ಲಾಂ ಫೌಂಡೇಶನ್ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದೆ.
ವರದಿ – ಹಫೀಝ್ ಇಸ್ಮಾಯಿಲ್ ಕೆ.ಸಿ ರೋಡ್
ಖಿದ್ಮತುಲ್ ಇಸ್ಲಾಂ ಫೌಂಡೇಶನ್.