janadhvani

Kannada Online News Paper

ಗೃಹ ಕಾರ್ಮಿಕರಿಗೂ ಬ್ಯಾಂಕ್ ಖಾತೆ ಕಡ್ಡಾಯ-ಖತರ್ ಕಾರ್ಮಿಕ ಸಚಿವಾಲಯ

ದೋಹಾ: ಕೋವಿಡ್ ಪ್ರತಿರೋಧ ಕಾರ್ಯಾಚರಣೆಯ ಭಾಗವಾಗಿ ದೇಶಾದ್ಯಂತ ಎಲ್ಲಾ ಹಣ ವಿನಿಮಯ ಕೇಂದ್ರಗಳನ್ನು ಮುಚ್ಚಿದ ನಂತರ ಖತರ್ ಸೆಂಟ್ರಲ್‌ ಬ್ಯಾಂಕ್, ಎಲ್ಲರೂ ಕಡ್ಡಾಯವಾಗಿ ಖಾತೆಗಳನ್ನು ತೆರೆಯುವಂತೆ ಆದೇಶಿಸಿತ್ತು.

ಇದೀಗ ಮನೆ ಕೆಲಸಗಾರರು ಮತ್ತು ಮನೆ ಚಾಲಕರಂತಹ ಗೃಹ ಕಾರ್ಮಿಕರಿಗೂ ಬ್ಯಾಂಕ್ ಖಾತೆ ಸಿದ್ಧಪಡಿಸುವಂತೆ ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವಾಲಯವು ಉದ್ಯೋಗದಾತರು ಮತ್ತು ಪ್ರಾಯೋಜಕರನ್ನು ಕೇಳಿಕೊಂಡಿದೆ.

ಗೃಹ ಕಾರ್ಮಿಕರಿಗೆ ಹೊಸ ಬ್ಯಾಂಕ್ ಖಾತೆ ತೆರೆಯುವಾಗ ಕನಿಷ್ಠ ಮೊತ್ತವನ್ನು ಠೇವಣಿಯಾಗಿ ಇಡಬೇಕಾಗಿಲ್ಲ ಮತ್ತು ಸೇವಾ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ಗೃಹ ಕಾರ್ಮಿಕರಿಗೆ ಬ್ಯಾಂಕಿಂಗ್ ಸೇವೆಗಳ ಬಗ್ಗೆ ಮತ್ತು ಬ್ಯಾಂಕ್ ಖಾತೆ ತೆರೆಯುವ ಅಗತ್ಯತೆಯ ಬಗ್ಗೆ ತಿಳಿಸಲು ಉದ್ಯೋಗದಾತರಿಗೆ ಸೂಚನೆ ನೀಡಲಾಗಿದೆ. ಕಾರ್ಮಿಕರ ಹಣ ಮತ್ತು ಮಾಹಿತಿಯನ್ನು ಸುರಕ್ಷಿತವಾಗಿಡಲು ಬ್ಯಾಂಕುಗಳು ಬದ್ಧವಾಗಿವೆ ಎಂದು ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com