janadhvani

Kannada Online News Paper

ಮೇ.1-21 ಎಸ್ಸೆಸ್ಸೆಫ್ ನಿಂದ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಆನ್ಲೈನ್ ತರ್ತೀಲ್ ಸ್ಪರ್ಧೆ

ಮಂಗಳೂರು: ಕೋವಿಡ್ -19 ಮಹಾಮಾರಿಯಿಂದ ಭಾರತ ದೇಶವು ಸಂಪೂರ್ಣವಾಗಿ ಲಾಕ್ಡೌನ್ ಆಗಿರುವ ಸಂದರ್ಭದಲ್ಲಿ ಕ್ಯಾಂಪಸ್ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಬಿಡುವು ಸಮಯವನ್ನು ವ್ಯರ್ಥ ಮಾಡದಿರಲು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು,ಅದರ ಭಾಗವಾಗಿ ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಹಾಗೂ ಕ್ಯಾಂಪಸ್ ವಿಭಾಗಗಳಿಂದ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ತರ್ತೀಲ್ ಆನ್ಲೈನ್ ಸ್ಪರ್ಧೆಗಳು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ಮದನಿರವರ ನೇತೃತ್ವದಲ್ಲಿ ಮೇ 1 ರಿಂದ ಮೇ 21ರ ತನಕ ನಡೆಯಲಿರುವುದು.

ಸ್ಪರ್ಧೆಗಳ ವಿವರ ಯೂನಿಟ್,ಡಿವಿಷನ್,ಝೋನ್ ,ಜಿಲ್ಲಾ,ರಾಜ್ಯ ಮಟ್ಟದಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ನಡೆಯಲಿರುವುದು.ಯೂನಿಟ್ ಮಟ್ಟದಲ್ಲಿ ಮೇ 1 ರಿಂದ 5,ಡಿವಿಷನ್ ಮಟ್ಟ ಮೇ 6 ರಿಂದ 10, ಝೋನ್ ಮಟ್ಟ ಮೇ 11 ರಿಂದ 15 ,ಜಿಲ್ಲಾ ಮಟ್ಟ ಮೇ 16 ರಿಂದ 19,ರಾಜ್ಯ ಮಟ್ಟದ ತರ್ತೀಲ್ ಮೇ 21 ರಂದು ನಡೆಯಲಿರುವುದು ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com