ಮನಾಮ: ಬಹರೈನಿನಲ್ಲಿ ಉದ್ಯೋಗದಲ್ಲಿದ ಕೆ.ಸಿ.ಎಫ್ ಬುದಯ್ಯ ಸೆಕ್ಟರ್ ಕಾರ್ಯಕರ್ತ ಮುಹಮ್ಮದ್ ರಫೀಕ್ ಕಿನ್ಯ ಅವರ ಪತ್ನಿ ಶಂಶಾದ್ ಅಮ್ಮೆಂಬಳ ಅವರು ನಿನ್ನೆ ಹೃದಯಾಘಾತದಿಂದ ಬಹರೈನ್ ಸಾರ್ ಅಮೇರಿಕನ್ ಹಾಸ್ಪಿಟಲ್ ನಲ್ಲಿ ನಿಧನ ಹೊಂದಿದ್ದರು.
ಬಹರೈನ್ ಕೆ.ಸಿ.ಎಫ್ ಸಾಂತ್ವನ ವಿಭಾಗದ ನೇತೃತ್ವದಲ್ಲಿ ನಿಯೋಗವೊಂದು ರಫೀಕ್ ಕಿನ್ಯರವರನ್ನು ಭೇಟಿ ಮಾಡಿ ಸಾಂತ್ವಾನ ಪಡಿಸಿ, ಜನಾಝ ಅಂತ್ಯ ಕ್ರಿಯೆಗೆ ಬೇಕಾದ ಎಲ್ಲಾ ಅಧಿಕೃತ ಧಾಖಲೆಗಳನ್ನು ಸಂಬಂಧ ಪಟ್ಟ ಇಲಾಖೆಗಳಿಂದ ಸಂಗ್ರಹಿಸಿತು.
ಎಲ್ಲಾ ವಿಧಿವಿಧಾನದಂತೆ ಶಂಶಾದ್ ರವರ ಜನಾಝವನ್ನು, ಮಹಾನುಭಾವರಾದ ಶೈಖ್ ಮುಹಮ್ಮದ್ ಇಬ್ನು ಯಅಖೂಬ್ ಇಜಾಝಿ (ನ.ಮ) ರವರು ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಬುಸೈತಿನ್ ಮಸ್ಜಿದ್ ದಫನ ಭೂಮಿಯಲ್ಲಿ ದಫನಗೈಯಲಾಯಿತು.
ಆರೋಗ್ಯಮತಿಯಾಗಿದ್ದ ಶಂಶಾದ್, ಮಗುವಿಗೆ ಆಹಾರವನ್ನು ನೀಡುತ್ತಿದ್ದ ವೇಳೆ ಹೃದಯಾಘಾತಗೊಂಡು ಬಹರೈನಿನ ಸಾರ್ ಅಮೆರಿಕನ್ ಹಾಸ್ಪಿಟಲಿಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯರಾದರು.
ಎರಡು ವರ್ಷ ಪ್ರಾಯದ ಮಗು ಸೇರಿದಂತೆ 2 ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹೊಂದಿದ್ದರು.
ಆ ಮಾತೆಯ ಪಾರತ್ರಿಕ ಜೀವನವನ್ನು ಸಂತೋಷಮಯಗೊಳಿಸಲಿ.ಅವರ ಕುಟುಂಬಕ್ಕೆ ಅಲ್ಲಾಹು ಶಾಂತಿ ಸಮಾಧಾನವನ್ನು ಕರುಣಿಸಲಿ.ಸುನ್ನೀ ಸಂಘ ಕುಟುಂಬದ ಎಲ್ಲಾ ಕಾರ್ಯಕರ್ತರು ಮೃತರ ಹೆಸರಿನಲ್ಲಿ ಖುರ್ಆನ್, ಯಾಸೀನ್ ಪಾರಾಯಣ ತಹ್ಲೀಳ್ ಹೇಳಿ ಮಗ್ಫಿರತ್ಗಾಗಿ ದುವಾ ಮಾಡ ಬೇಕಾಗಿ ಬಹರೈನ್ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಯು ವಿನಂತಿಸಿಕೊಂಡಿದೆ.