ಮಂಗಳೂರು: ಕೇರಳದ ಪಯ್ಯನ್ನೂರ್‌ನಲ್ಲಿ ವಾಸವಾಗಿರುವ ಪೋಲೀಸ್ ಪೇದೆಯೊಬ್ಬರ ತಂದೆಯು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅವರಿಗೆ ಡಯಾಲಿಸೀಸ್ ಔಷಧಿ ಸಿಗದೆ ಕಂಗಾಲಾಗಿದ್ದರು.
ಲಾಕ್‌ಡೌನ್ ಕಾರಣದಿಂದ ಒಂದು ತಿಂಗಳಿಂದ ಔಷಧಿಯನ್ನು ತಲುಪಿಸಲು ಅಸಾದ್ಯವಾಗಿದ್ದು, ಕೊನೆಗೆ ಕಾಸರಗೋಡು ಎಸ್‌ವೈಎಸ್ ಹೆಲ್ಪ್ ಡೆಸ್ಕ್ ಗೆ ಮಾಹಿತಿ ನೀಡಲಾಗಿತ್ತು.
ಅವರು ತಕ್ಷಣ ಬೆಂಗಳೂರು ಎಸ್‌ವೈಎಸ್ ಸಾಂತ್ವನ ವಿಭಾಗಕ್ಕೆ ಮಾಹಿತಿ ನೀಡಿದ್ದು, ಬೆಂಗಳೂರು ಎಸ್‌ವೈಎಸ್ ಸಾಂಥ್ವನ ಅಧ್ಯಕ್ಷರು ಇಬ್ರಾಹೀಂ ಸಖಾಫಿ ನಲ್ಲೂರ್,ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಇಬ್ರಾಹೀಂ ಸಖಾಫಿ ಪಯೋಟ, ಜಯನಗರ ಸೆಂಟರ್ ಅಧ್ಯಕ್ಷ ತಾಜುದ್ದೀನ್ ಫಾಳಿಲಿ ನೇತೃತ್ವದಲ್ಲಿ ಇಲ್ಯಾಸ್ ಕೆ.ಆರ್. ಪುರಂ ವಿಮಲ್ ಆಸ್ಪತ್ರೆಯಿಂದ ಶನಿವಾರ ಸಂಜೆ 21 ಬಾಕ್ಸ್ ಔಷಧಿಯನ್ನು ಪಡೆದು ಮಂಗಳೂರಿಗೆ ಕಳಿಸಿ ಕೊಟ್ಟಿದ್ದರು.
ರಾತ್ರಿ 2ಗಂಟೆಗೆ ಬೈಕಂಪಾಡಿಗೆ ತಲುಪಿದ ಔಷಧವನ್ನು ಬೆಂಗಳೂರು ಜಿಲ್ಲಾ ಎಸ್‌ವೈಎಸ್ ಮೀಡಿಯಾ ಚೆಯರ್ಮೆನ್ ಕೆ.ಎಚ್. ಇಸ್ಮಾಯೀಲ್ ಸಅದಿ ಕಿನ್ಯ ಹಾಗೂ ಕೆ.ಎಂ.ಮುಹಮ್ಮದ್ ಶರೀಫ್ ಕಲ್ಕಟ್ಟ ರವರು ನೇರವಾಗಿ ಕೇರಳ ಗಡಿ ತಲಪಾಡಿಗೆ ತಲುಪಿಸಿ, ಕಾಸರಗೋಡು ಜಿಲ್ಲೆಯ ಎಸ್‌ವೈಎಸ್ ಸಾಂತ್ವನ ವಿಭಾಗದ ಕಾರ್ಯದರ್ಶಿ ಶಾಫಿ ಸಅದಿ ಹಾಗೂ ಹಸನ್ ಅಹ್ಸನಿ ಉಸ್ತಾದರಿಗೆ ಹಸ್ತಾಂತರಿಸಿದರು.