ಕೊರೊನಾ ವ್ಯೆರಸ್ ಎಂಬ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಜನ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದು, ತಿನ್ನಲು ಆಹಾರವಿಲ್ಲದೆ ಕಷ್ಟ ಪಡುತ್ತಿದ್ದಾರೆ.
ಇಂತಹ ಸಮಯದಲ್ಲಿ ವಿವಿಧ ಜಮಾತ್ ಹಾಗೂ ಗಲ್ಫ್ ಕಮಿಟಿಗಳು ಜನರ ನೆರವಿಗೆ ಧಾವಿಸಿದ್ದು, ಜನರಿಗೆ ಉಚಿತವಾಗಿ ಆಹಾರ ಕಿಟ್ ಗಳನ್ನು ನೀಡಿ ಜನರ ಕಣ್ಣೀರು ಒರೆಸುವ ಕೆಲಸದಲ್ಲಿ ನಿರತವಾಗಿದೆ. ಅಳಕೆಮಜಲಿನ ಮುಹಿಯುದ್ದೀನ್ ಜುಮಾ ಮಸ್ಜಿದ್ ಕಮಿಟಿ ಹಾಗೂ ಗಲ್ಫ್ ದಾನಿಗಳ ನೆರವಿನಿಂದ ಅರ್ಹ ಬಡ, ನಿರ್ಗತಿಕ ಹಾಗೂ ಮಧ್ಯಮ ವರ್ಗದ ಜನರಿಗೆ ಕಿಟ್ ವಿತರಿಸಲಾಯಿತು.
ಇಂತಹ ಸಂಕಷ್ಟ ಸಮಯದಲ್ಲಿ ಜನರಿಗೆ ಸಹಾಯ ಮಾಡುವ ಮೂಲಕ ಈ ಜನರ ಹಸಿವನ್ನು ನೀಗಿಸುವಲ್ಲಿ ಪ್ರಯತ್ನಿಸುತ್ತಿದ್ದು, ನಿಸ್ವಾರ್ಥ ಸೇವೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.