ಕೈರಂಗಳ : ಲಾಕ್’ಡೌನ್ ಆರಂಭದಿಂದಲೇ ಮರ್ಹೂಮ್ ಸಿರಾಜುದ್ದೀನ್ ಪಡಿಕ್ಕಲ್ ರವರ ಸ್ಮರಣಾರ್ಥದಲ್ಲಿ ತುರ್ತು ಸೇವೆ ನಡೆಸುತ್ತಾ , ಅರ್ಹ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ತಲುಪಿಸಿ ಮಾನವೀಯ ಸೇವೆ ನಡೆಸುತ್ತಿದ್ದ SSF ಮೋಂಟುಗೋಳಿ ಸೆಕ್ಟರ್ ವತಿಯಿಂದ ಸುಮಾರು 42,000 ಸಾವಿರ ರೂ ವೆಚ್ಚದಲ್ಲಿ 40 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಿ ಶ್ಲಾಘನೆಗೆ ಪಾತ್ರವಾಗಿದೆ.
ಇದಲ್ಲದೆ ಇದರ ಮೊದಲು ಆಹಾರ ಸಾಮಾಗ್ರಿಗಳಿಲ್ಲದೆ ಸಂಕಷ್ಟ ಅನುಭವಿಸುವ ಹಲವು ಕುಟುಂಬಗಳ ಕರೆಗೆ ಸ್ಪಂದಿಸುತ್ತಾ ತಕ್ಷಣ ಆಹಾರ ಸಾಮಾಗ್ರಿಗಳನ್ನು ಪೊರೈಸಲಾಗಿದೆ.ಹಾಗೂ ಸೆಕ್ಟರ್ ವ್ಯಾಪ್ತಿಯಲ್ಲಿ ತುರ್ತು ಸೇವೆಗಳಿಗೆ ಎರಡು ವಾಹನಗಳ ವ್ಯವಸ್ಥೆಯನ್ನು ಮಾಡಿದೆ, ಈ ಎಲ್ಲಾ ಯೋಜನೆಗಳಿಗೆ ತುರ್ತು ಸೇವೆಕರು, ವಾಟ್ಸಾಪ್ ಗ್ರೂಪ್’ನ ಸದಸ್ಯರು, ಪ್ರವಾಸಿ ಸದಸ್ಯರು,ಶಾಖಾಗಳ ನಾಯಕರು ಸದಸ್ಯರು ಸಂಪೂರ್ಣವಾಗಿ ಸಹಕರಿಸಿದ್ದಾರೆ.
ಮುಂದೆಯೂ ನಮ್ಮ ಕಾರ್ಯಯೋಜನೆಗಳನ್ನು ವಿಸ್ತರಿಸುವ ಹುಮ್ಮಸ್ಸಿನಲ್ಲಿರುವ ಸಂಘಟನೆಯ ಸದಸ್ಯರು ಮತ್ತಷ್ಟು ದಾನಿಗಳ ಸಹಾಯ ಸಹಕಾರ ಮತ್ತು ಎಲ್ಲಾರ ಪ್ರಾರ್ಥನೆಗಳನ್ನು ನಿರೀಕ್ಷಿಸುತ್ತೇವೆ..