janadhvani

Kannada Online News Paper

ನಿರ್ಬಂಧಗಳಿಗೆ ಭಾಗಶಃ ವಿನಾಯಿತಿ- ವಿಶೇಷ ಅನುಮತಿಯಿಲ್ಲದೆ ಪ್ರಯಾಣಿಸಲು ಅವಕಾಶ

ದುಬೈ: ಕೋವಿಡ್ ಪ್ರತಿರೋಧದ ಭಾಗವಾಗಿ ದುಬೈನಲ್ಲಿ ವಿಧಿಸಲಾದ ನಿರ್ಬಂಧಗಳಿಗೆ ಭಾಗಶಃ ವಿನಾಯಿತಿ ನೀಡಲಾಗಿದೆ. ವಿಶೇಷ ಅನುಮತಿಯಿಲ್ಲದೆ ಬೆಳಗ್ಗೆ 7 ರಿಂದ ರಾತ್ರಿ 10 ರವರೆಗೆ ಪ್ರಯಾಣಿಸಲು ಅವಕಾಶವಿದೆ.

ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದ್ದು, ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ನಿಯಂತ್ರಣದೊಂದಿಗೆ ಕಾರ್ಯನಿರ್ವಹಿಸಲಿದ್ದು, ಚಿತ್ರಮಂದಿರಗಳು, ಮನರಂಜನಾ ಕೇಂದ್ರಗಳು ಮತ್ತು ಪ್ರಾರ್ಥನಾ ಕೊಠಡಿಗಳನ್ನು ತೆರೆಯಲಾಗುವುದಿಲ್ಲ.

ಜಿಮ್, ಈಜುಕೊಳ, ಬಾರ್ ಮತ್ತು ಮಸಾಜ್ ಪಾರ್ಲರ್‌ಗಳಿಲ್ಲದೆ ಹೋಟೆಲ್‌ಗಳು ಕಾರ್ಯಾಚರಿಸಬಹುದು. 30% ಕ್ಕಿಂತ ಹೆಚ್ಚು ಉದ್ಯೋಗಿಗಳು ಸಂಸ್ಥೆಯಲ್ಲಿ ಇರಬಾರದು. ಸುರಕ್ಷಿತ ಅಂತರ ಪಾಲಿಸಿ, ಮುಖವಾಡ ಧರಿಸಿ ಮಾತ್ರ ಹೊರಗಡೆ ಬರಬಹುದು. ಉಲ್ಲಂಘನೆ ಗಮನಕ್ಕೆ ಬಂದರೆ 1,000 ದಿರ್ಹಂ ದಂಡ ವಿಧಿಸಲಾಗುತ್ತದೆ.

ವ್ಯಾಯಾಮ ಮತ್ತಿತರ ಕಾರ್ಯಗಳಿಗಾಗಿ ಮನೆಯ ಪರಿಸರಕ್ಕೆ ಇಳಿಯಬಹುದು. ಸಂಬಂಧಿಕರ ಸಂದರ್ಶನ ಮಾಡಬಹುದು ಆದರೆ, 60 ವರ್ಷ ದಾಟಿದವರ ಸಂದರ್ಶನ ಉಪೇಕ್ಷಿಸಬೇಕು. ಐದಕ್ಕಿಂತ ಹೆಚ್ಚಿನವರು ಗುಂಪು ಸೇರಬಾರದು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ. ದುಬೈ ಮೆಟ್ರೋ ಮತ್ತು ಇತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಈ ತಿಂಗಳ 26 ರಿಂದ ಕಾರ್ಯನಿರ್ವಹಿಸಲಿವೆ.

error: Content is protected !! Not allowed copy content from janadhvani.com