ದೇಶದ ಹಿತಕ್ಕಾಗಿ ಜಾರಿ ಮಾಡಿದ 21ದಿನದ ಲಾಕ್ ಡೌನ್ ಕಾರಣದಿಂದ ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗುತ್ತಿವೆ.
ಸಂಘ ಸಂಸ್ಥೆಗಳು ಕೊಡುಗೈ ದಾನಿಗಳು ಸಹಕಾರ ನೀಡಿದರೂ ದಿನ ಸಂಬಳ ಪಡೆಯುವ ಮದ್ಯಮ ವರ್ಗವೂ ಇವತ್ತು ಹಸಿವಿನಿಂದ ಕಂಗೆಟ್ಟಿವೆ.
ನಮ್ಮ ದೇಶದಲ್ಲಿ ಹಸಿವಿನಿಂದ ಮರಣ ಹೊಂದಿದ ಸಂಖ್ಯೆ ಹೆಚ್ಚುತ್ತಿವೆ.
ಹೇಗಾದರೂ ಏಪ್ರಿಲ್ 14ರ ನಂತರವಾದರೂ ದುಡಿದು ಕುಟುಂಬ ಸಾಗಿಸಬಹುದು ಅನ್ನುವ ನಿರೀಕ್ಷೆಯಲ್ಲಿದ್ದ ಜನರಿಗೆ ಮತ್ತೆ 30ರ ತನಕದ ಲಾಕ್ ಡೌನ್ ಗಾಯದ ಮೇಲೆ ಬರೆ ಎಳೆಂದತಾಗಿವೆ.
ಆದರಿಂದ ಹಸಿವು ಮುಕ್ತ ಯೋಜನೆಯೊಂದಿಗೆ
ಶೀಘ್ರವಾಗಿ ಆಹಾರ ಕಿಟ್ ವಿತರಿಸುವಂತೆ ವಿನಂತಿಸಿದ್ದಾರೆ.
ಈಗಾಗಲೇ ಸೊಸೈಟಿ ಮೂಲಕ ಅಕ್ಕಿ ದೊರಕಿದ್ದು ಉಳಿದಂತೆ ಒಂದು ತಿಂಗಳಿಗೆ ಬೇಕಾಗಿರುವ
ಸಕ್ಕರೆ,ಚಾ ಹುಡಿ, ಮೆನಸು, ಎಣ್ಣೆ, ಉಪ್ಪು ಸೇರಿಂದಂತೆ ಪದಾರ್ಥಗಳಿಗೆ ಬೇಕಾದ ಕಾಳು ಬೀಜಗಳು ಒಳಗೊಂಡ ಆಹಾರ ಕಿಟ್ಟನ್ನು ಕೂಡಲೇ ವಿತರಿಸುವಂತೆ ವಿನಂತಿಸಿದ್ದಾರೆ.
ಇದಕ್ಕಾಗಿ ಬೇಕಾಗಿರುವ ಯೋಜನೆ ಸಿದ್ದಗೊಳಿಸುವಂತೆ ಹಾಗೂ ಪ್ರತಿದಿನ ಔಷದಿ ಉಪಯೋಗಿಸುವವರಿಗೆ ವೈದ್ಯರ ಪತ್ರದೊಂದಿಗೆ ಸರಕಾರದಿಂದ ಉಚಿತ ಔಷದಿ ನೀಡುವಂತೆಯೂ ಪತ್ರದಲ್ಲಿ ಕೋರಿದ್ದಾರೆ. ಈ ಬಗ್ಗೆ ಅಧಿಕಾರಿ ಸಂಸದರು ಸಚಿವರು ಶಾಸಕರ ಗಮನಕ್ಕೆ ತರುವುದಾಗಿ ತಿಳಿಸಿರುತ್ತಾರೆ.
ಕೊರೋನಾ ಕೋವಿಡ್19 ತಡೆಗಟ್ಟಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಯತ್ನಗಳು ಶ್ಲಾಘನೀಯ. ಆದರೆ ಮತ್ತೆ ಮುಂದುವರಿದ ಲಾಕ್ ಡೌನ್ ನಿಂದ ಮತ್ತಷ್ಟು ಜನರು ಹಸಿವಿನಿಂದ ತೊಂದರೆ ಅನುಭವಿಸಲಿದ್ದಾರೆ ಅದ್ದರಿಂದ ರಾಜ್ಯದಲ್ಲಿ ಪ್ರತೀ ಅರ್ಹ ಕುಟುಂಬಕ್ಕೂ ಆಹಾರ ಕಿಟ್ ವಿತರಿಸುವಂತೆ ಎಸ್.ಕೆ.ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ಅವರು ಈಮೈಲ್, ಟ್ವಿಟ್ಟರ್ ಹಾಗೂ ಆಪ್ತ ಕಾರ್ಯದರ್ಶಿಗಳ ಮೂಲಕ ಮನವಿ ಮಾಡಿದ್ದಾರೆ.