janadhvani

Kannada Online News Paper

ಆಹಾರ ವಿತರಣೆಗೆ ಎಂ.ಎ.ಯೂಸುಫ್ ಅಲಿಯವರಿಂದ 1 ಲಕ್ಷ ದಿರ್ಹಮ್ ಸಹಾಯ

ಅಬುಧಾಬಿ: ಕೋವಿಡ್ 19 ಹರಡುವಿಕೆಯಿಂದ ಸಂಕಷ್ಟಕ್ಕೀಡಾಗಿರುವವರಿಗೆ ಸಹಾಯ ಮಾಡುತ್ತಿರುವ ಸಂಘಟನೆಗಳಿಗೆ ಲುಲು ಗ್ರೂಪ್ ಅಧ್ಯಕ್ಷ ಎಂ.ಎ. ಯೂಸುಫ್ ಅಲಿಯವರ ಸಹಾಯ ಹಸ್ತ.

ಕೋವಿಡ್‌ನಿಂದಾಗಿ ಆಹಾರ ಸಿಗದೆ ಕಷ್ಟಪಡುತ್ತಿರುವ ಕಡಿಮೆ ಆದಾಯದ ಕಾರ್ಮಿಕರಿಗೆ ಆಹಾರವನ್ನು ವಿತರಿಸಲು ಯೂಸುಫ್ ಅಲಿಯವರು 1 ಲಕ್ಷ ದಿರ್ಹಮ್ ನೀಡಿದ್ದಾರೆ.

ಈ ಹಣವನ್ನು ದುಬೈ ಕೆಎಂಸಿಸಿ (ಎಇಡಿ 50,000), ಇಂಕಾಸ್ ದುಬೈ, ಶಾರ್ಜಾ (ಎಇಡಿ 25,000) ಮತ್ತು ಅಬುಧಾಬಿ ಇಸ್ಲಾಮಿಕ್ ಸೆಂಟರ್ (ಎಇಡಿ 25,000) ಗೆ ನೀಡಲಾಯಿತು.

ಈ ಹಿಂದೆ ಅವರು ಕೇರಳ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 10 ಕೋಟಿ ರೂ. ಮತ್ತು ಪಿಎಂ ಕೇರ್ಸ್ ಯೋಜನೆಗೆ 25 ಕೋಟಿ ರೂ.ಸಹಾಯ ನೀಡಿದ್ದಾರೆ. ಕೇರಳದಲ್ಲಿ ಮಾಸ್ಕ್ ಕೊರತೆಯನ್ನು ನೀಗಿಸಲು ಒಂದು ಲಕ್ಷ ಮಾಸ್ಕ್ ನೀಡಲಾಗುವುದು ಎಂದು ಅವರು ಕೇರಳ ಸರ್ಕಾರಕ್ಕೆ ತಿಳಿಸಿದ್ದಾರೆ.

error: Content is protected !! Not allowed copy content from janadhvani.com