✍🏻Nizzu4ever👁ಉರುವಾಲು ಪದವು
ಪೊಲೀಸ್ ಎಂದರೆ ಲಾಠಿ ಬೀಸುವವರು ಮಾತ್ರ ಎಂದು ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ನೋಡುವಾಗ ಅನಿಸಿತ್ತು. ಲಾಕ್ ಡೌನ್ ಘೋಷಣೆಯಾದ ಬಳಿಕ ಜನರನ್ನು ನಿಯಂತ್ರಿಸಲಿಸಲು ಪೊಲೀಸ್ ರು ನಡೆಸಿದ ಕೆಲವೊಂದು ರುದ್ರನರ್ತನಗಳನ್ನು ನೋಡುವಾಗ ನಿಜವಾಗಲೂ ಇವರು ಮನುಷ್ಯರೇ ಎಂಬ ಸಂಶಯ ಹುಟ್ಟು ಹಾಕಿತ್ತು.
ಕೈಯ್ಯಲ್ಲಿ ಲಾಠಿ ಸಿಕ್ಕಿದ ತಕ್ಷಣ ಅದನ್ನು ಬೀಸಿ ಹೊಡೆಯುವುದೇ ಎಂಬರ್ಥದಲ್ಲಿ ಪೊಲೀಸ್ ರು ವರ್ತಿಸುತ್ತಿದ್ದರು. ಪೊಲೀಸ್ ರ ಅಟ್ಟಹಾಸಕ್ಕೆ ಅಮಾಯಕ ಜೀವವೊಂದು ಬಲಿಯಾಗಿತ್ತು. ಕೆಲವರು ಕೈ ಕಾಲು ಬೆನ್ನು ಮೂಲೆ ಮುರಿದು ಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಲಾಗಿ ನಿಂತು ಸ್ಪರ್ಧಾತ್ಮಕ ರೀತಿಯಲ್ಲಿ ಹೊಡೆಯುತ್ತಿರುವುದು ನೋಡಿದರೆ ಕೋರೋಣ ಜಾಗ್ರತಿಗಿಂತಲೂ ಪೊಲೀಸ್ ರ ಭಯವೇ ಜನರಿಗೆ ಹೆಚ್ಚಾಗಿದೆ.
ರೋಗ ನಿಯಂತ್ರಣಕ್ಕಾಗಿ ಕರ್ಫ್ಯೂ ಘೋಷಿಸಿದಾಗ ಅದನ್ನು ಪಾಲಿಸದಿದ್ದರೆ ಶಿಕ್ಷಾರ್ಹ ಅಪರಾಧ. ಆದರೆ ಅಗತ್ಯವಾಗಿ ರೋಗಿಗಳನ್ನು ಆಸ್ಪತ್ರೆ ಸಾಗಿಸಲು, ಗರ್ಭಿಣಿ ಮಹಿಳೆಯರನ್ನು ಸಾಗಿಸಲು ಅವಕಾಶ ಮಾಡಿ ಕೊಡದ ಪೊಲೀಸರನ್ನು ರಾಕ್ಷಸರು ಎಂದು ಕರೆಯದೆ ಏನೆಂದು ಕರೆಯಲು ಸಾಧ್ಯ? ಮಾನವೀಯತೆ ಎಂಬುದು ಯಾವುದೇ ಯೂನಿವೆರ್ಸಿಟಿಯಿಂದ ಪಡೆದುಕೊಳ್ಳುವುದಲ್ಲ. ಅದು ರಕ್ತದಲ್ಲಿ ಹುಟ್ಟಿ ಬೆಳೆಯಬೇಕು.
ನಿನ್ನೆಯಿಂದ ಧಾರವಾಡ ಎಸಿಪಿ ಅನುಷಾ ಮೇಡಂ ಅವರ ಕೋರೋಣ ಬಗ್ಗೆ ನೀಡುತ್ತಿರುವ ಅವರ್ನೆಸ್ ವಿಡಿಯೋ ಒಂದು ವೈರಲ್ ಆಗುತ್ತಿದೆ. ನಿಜಕ್ಕೂ ಅದನ್ನು ನೋಡಿದಾಗ ಮೇಡಂ ಬಗ್ಗೆ ಅಭಿಮಾನ ಉಂಟಾಯಿತು. ತನ್ನ ಭಾಷಣದ ಆರಂಭದಲ್ಲೇ ತನಗೆ ಜನ್ಮ ನೀಡಿದ ತಾಯಿ ಬಗ್ಗೆ ಮತ್ತು ಪುನರ್ಜನ್ಮ ನೀಡಿದ ಡಾಕ್ಟರ್ ಬಗ್ಗೆ ಪ್ರಸ್ತಾಪಿಸಿ ಮಾತನಾಡಿ ಸೌಹಾರ್ದ ಬದುಕನ್ನು ಬಯಸುವ ಹೃದಯವೆಂದು ನಿರೂಪಿಸಿಬಿಟ್ಟರು.
“ನಾನು ನಿಮ್ಮ ಮನೆಯ ಮಗಳು, ನಿಮ್ಮ ಮನೆಯ ಮಗಳಂತೆ ಟ್ರೀಟ್ ಮಾಡಿ. ನಮ್ಮ ಸಾಹೋದರ್ಯತೆ ಸಂಭಂದಕ್ಕೆ ಯಾರಾದರೂ ಹುಲಿ ಹಿಂಡಲು ಬಂದರೆ ನಾನು ಸುಮ್ಮನಿರಲು ಸಾಧ್ಯವಿಲ್ಲ. ನಮ್ಮ ಕರ್ತವ್ಯಕ್ಕೆ ಯಾರೂ ಅಡ್ಡಿಪಡಿಸಬೇಡಿ. ನಿಮ್ಮ ರಕ್ಷಣೆಗಾಗಿ ನನ್ನ ಕುಟುಂಬವನ್ನು ಬೆಂಗಳೂರಲ್ಲಿ ಬಿಟ್ಟು ಬಂದಿದ್ದೇನೆ. ನೀವು ಸಹಕರಿಸಿ” ಎಂದು ಹೃದಯದ ಭಾಷೆಯಿಂದ ತಿಳಿಸುವಾಗ ಕೇಳಿ ಅನುಸರಿಸದವರು ಇರಲು ಸಾಧ್ಯವೇ?
ಊರಲ್ಲಿರುವ ಎಲ್ಲರೂ ವಿದ್ಯಾವಂತರಲ್ಲ. ಅವರಿಗೆ ತಿಳಿಹೇಳಬೇಕಾದ ಅನಿವಾರ್ಯತೆ ಕಾನೂನು ಭೋದಕರ ಕರ್ತವ್ಯವಾಗಿದೆ. ಏಕಾಏಕಿ ಲಾಠಿ ಬೀಸಿ ಹೊಡೆಯುವಾಗ ಜನರು ಭೀತಿಗೊಳಗಾಗುತ್ತಾರೆ. ಸಮಾಧಾನದಿಂದ ಸಂಯಮದಿಂದ ಭೋದಿಸಿದರೆ ಅನುಸರಿಸುತ್ತಾರೆ. ಲಾಠಿ ಏಟು, ಕೆಟ್ಟ ಬೈಗುಳಗಳಿಂದ ಜನರು ಆಕ್ರೋಶಿತರಾಗುತ್ತಾರೆ. ಆದ್ದರಿಂದ ಎಸಿಪಿ ಅನುಷಾ ಮೇಡಂ ಊರ ಹಿರಿಯರನ್ನು ಕರೆದು ಪರಿಚಯ ಮಾಡಿ ಅವರನ್ನು ಅಂತರ ಕಾಯ್ದುಕೊಂಡು ಕುಳ್ಳಿರಿಸಿ ಕೋರೋನಾ ಬಗ್ಗೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವಂತೆ ಭೋದಿಸುತ್ತಾರೆ.
ನಿಮ್ಮ ಅನುಗ್ರಹೀತ ದಿನ ಶಭೇ ಬರಾಅತ್ ನ್ನು ಮನೆಯಲ್ಲೇ ಆಚರಿಸಿ ಪ್ರಾರ್ಥಿಸಿ ಎಂದು ಕರೆಕೊಡುತ್ತಾರೆ. ಎಷ್ಟೊಂದು ಸುಂದರ ಮಾತುಗಳು. ನಿಜಕ್ಕೂ ಧಾರವಾಡದ ಜನತೆ ಪುಣ್ಯವಂತರು. ಯಾರೂ ಲಾಠಿ ಬೀಸಬೇಡಿ ಮನೆಯಿಂದ ಹೊರ ಬರಲು ಬಿಡಬೇಡಿ ಎಂದು ಹೇಳಿದ ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿದೆ. ಪೋಲೀಸರು ಇದನ್ನು ಸವಾಲಾಗಿ ಸ್ವೀಕರಿಸುವಂತೆ ಪರೋಕ್ಷವಾಗಿ ಕರೆ ಕೊಟ್ಟಿದ್ದಾರೆ. ಜನರ ಬಗ್ಗೆ ಕನಿಕರ ಇರುವ ಅಧಿಕಾರಿಗಳು ಇದ್ದರೆ ನಾಡಿನಲ್ಲಿ ಶಾಂತಿ ಸಾಮರಸ್ಯೆ ಸೌಹಾರ್ದತೆ ಸಹಬಾಳ್ವೆ ಉಂಟಾಗುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಅನುಷಾ ಮೇಡಂ ಆಗಿದ್ದಾರೆ.
ಡಾಕ್ಟರ್, ಪೋಲೀಸ್, ವಕೀಲರು ಇವರಲ್ಲಿ ಜನರು ನ್ಯಾಯದ ಬಗ್ಗೆ ಹೆಚ್ಚಿನ ಭರವಸೆಯಿಟ್ಟು ಕೊಂಡವರಾಗಿದ್ದಾರೆ. ಅವರು ಅನ್ಯಾಯದ ಪರ ನಿಂತರೆ ಜನರು ಯಾರ ಮೇಲೆ ಭರವಸೆಯಿಡಲು ಸಾಧ್ಯ? ಅಂತಹ ಸಂದರ್ಭದಲ್ಲಿ ಜನರೇ ಕಾನೂನು ಕೈಗೆತ್ತಿಕೊಳ್ಳುತ್ತಾರೆ. ಆದ್ದರಿಂದ ಕಾನೂನು ಪಾಲಕರು ನ್ಯಾಯಯುತವಾಗಿ, ಮಾನವೀಯತೆಯಿಂದ ವರ್ತಿಸಬೇಕು. ಆಗಲೇ ಸುಂದರ ಸಮಾಜವನ್ನು ನಿರ್ಮಿಸಲು ಸಾಧ್ಯ.