janadhvani

Kannada Online News Paper

ಸೋಂಕು ನಿವಾರಣೆ ಯಜ್ಞ: ನಿರ್ಬಂಧ ವೇಳೆಯಲ್ಲಿ ಯಾರಿಗೆಲ್ಲಾ ವಿನಾಯ್ತಿ?

ದುಬೈ: ರಾಷ್ಟ್ರೀಯ ಸೋಂಕು ನಿವಾರಣೃ ಯಜ್ಞದ ಭಾಗವಾಗಿ ರಾತ್ರಿಯಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಹಗಲಿಗೂ ವಿಸ್ತರಿಸಲು ನಿರ್ಧರಿಸಲಾಗಿದ್ದರೂ, ಕೆಲವು ವಿಭಾಗಗಳಿಗೆ ವಿನಾಯಿತಿ ನೀಡಲಾಗಿದೆ.
ಅವರ ಮಾಹಿತಿ ಕೆಳಗೆ:

  • ಸೂಪರ್ಮಾರ್ಕೆಟ್, ಹೋಟೆಲ್ ಪಾರ್ಸೆಲ್ ಸೇವೆ, ಔಷಧಾಲಯ ಸೇರಿದಂತೆ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರು.
  • ಅಗತ್ಯ ವಸ್ತುಗಳನ್ನು ಖರೀದಿಸಲು ಒಬ್ಬ ವ್ಯಕ್ತಿ ಮಾತ್ರ ಮನೆಯಿಂದ ಹೋಗಬಹುದು.
  • ನೀರು, ವಿದ್ಯುತ್, ಪೆಟ್ರೋಲ್, ಗ್ಯಾಸ್ ಸ್ಟೇಷನ್, ದೂರಸಂಪರ್ಕ ಸೇವೆಗಳು, ಮಾಧ್ಯಮ, ವಿಮಾನ ನಿಲ್ದಾಣ, ಕಸ್ಟಮ್ಸ್, ಶಿಪ್ಪಿಂಗ್ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರು.
  • ನಿರ್ಮಾಣ ಕಾರ್ಯಗಳನ್ನು ಮಾಡುವವರು. (ಪುರಸಭೆಯಿಂದ ವಿಶೇಷ ಅನುಮತಿ ಪಡೆದಿರಬೇಕು)
  • ನಗರ ನೈರ್ಮಲ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಹಾಗೂ ಕೋವಿಡ್ ತಡೆಗಟ್ಟುವಿಕೆಗಾಗಿ ಕೆಲಸ ಮಾಡುವ ಸಾರ್ವಜನಿಕ ಮತ್ತು ಖಾಸಗಿ ವಲಯದ ಸದಸ್ಯರು.
  • ಬ್ಯಾಂಕ್, ಮನಿ ಎಕ್ಸ್‌ಚೇಂಜ್ ಕ್ಷೇತ್ರದಲ್ಲಿ ಕೆಲಸ ಮಾಡುವವರು (ಬೆಳಗ್ಗೆ 8 ರಿಂದ ಮಧ್ಯಾಹ್ನ 2ರ ನಡುವೆ ಕೆಲಸ ನಿಮಿತ್ತ ಹೊರಡಬಹುದು)
  • ನಿರ್ವಹಣೆ ಸೇವಕರು
  • ಕಾರ್ಯಾಚರಣೆಗೆ ಅನುಮತಿ ಇರುವ ಲಾಂಡ್ರಿ ಸಂಸ್ಥೆಗಳ ನೌಕರರು ಕೂಡ ಮಧ್ಯಾಹ್ನ 2 ರವರೆಗೆ ಕೆಲಸಕ್ಕಾಗಿ ಹೊರಡಬಹುದು.

error: Content is protected !! Not allowed copy content from janadhvani.com