janadhvani

Kannada Online News Paper

ಯಾತ್ರೆ ಮೊಟಕುಗೊಂಡಿರುವ ಭಾರತೀಯರಿಗೆ ಎಮಿರೇಟ್ಸ್ ಏರ್‌ಲೈನ್ಸ್ ನಿಂದ ವಿಶೇಷ ಸೇವೆ

ದುಬೈ: ಯುಎಇಯಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರಿಗೆ ಅವಕಾಶ ನೀಡಲಾಗಿದ್ದು, ಕೊಚ್ಚಿ ಮತ್ತು ತಿರುವನಂತಪುರಂಗೆ ಎಮಿರೇಟ್ಸ್ ಏರ್‌ಲೈನ್ಸ್ ವಿಶೇಷ ಸೇವೆಗಳನ್ನು ನಡೆಸಲಿದೆ. ಆಸಕ್ತರು ತಮ್ಮ ದೇಶಗಳಿಗೆ ಮರಳಲು ಇದೊಂದು ವಿಶೇಷ ಸೇವೆಯಾಗಲಿದೆ.

ಕೋವಿಡ್ ಹರಡುವುದರೊಂದಿಗೆ, ಯುಎಇಯಲ್ಲಿ ಅನೇಕ ಭಾರತೀಯರು ಸಿಕ್ಕಿಹಾಕಿಕೊಂಡಿದ್ದಾರೆ. ಎಮಿರೇಟ್ಸ್ ಅಂತಹ ಜನರಿಗೆ ಅವಕಾಶವನ್ನು ನೀಡಿದ್ದು, ಎಮಿರೇಟ್ಸ್ ವಿಶ್ವದಾದ್ಯಂತ 14 ನಗರಗಳಿಗೆ ವಿಶೇಷ ಸೇವೆಗಳನ್ನು ಘೋಷಿಸಿದೆ.

ಕೊಚ್ಚಿ ಮತ್ತು ತಿರುವನಂತಪುರಕ್ಕೆ ವಿಶೇಷ ವಿಮಾನ ಹಾರಾಟ ನಡೆಸಲಿದ್ದು, ವಿಶೇಷ ಅನುಮತಿ ಪ್ರಕಾರ ಸೇವೆಗಳು ಎಪ್ರಿಲ್ 6ರಿಂದ ಪ್ರಾರಂಭವಾಗಲಿವೆ.

ಭಾರತೀಯ ನಗರಗಳಾದ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನಯಾನ ಸೇವೆ ಘೋಷಿಸಿದೆ. ಜನರನ್ನು ತಲುಪಿಸಲು ಎಮಿರೇಟ್ಸ್ ಈಗಾಗಲೇ ಭಾರತ ಸೇರಿದಂತೆ ವಿದೇಶಗಳಿಂದ ಅನುಮತಿ ಕೋರಿತ್ತು.

ನಿರ್ಧಾರವು ಭಾರತದ ಅನುಮೋದನೆ ಪಡೆಯುವುದು ಸಾಧದ್ಯವಾಗಲಿದೆಯೇ ಎಂಬುದರ ಮೇಲೆ ಅವಲಂಬಿತವಾಗಿದೆ. ವಿದೇಶಿ ವಿಮಾನಯಾನ ಸಂಸ್ಥೆಗಳ ಮೇಲೆ ಭಾರತದ ನಿಷೇಧ ಮುಂದುವರಿದರುವಾಗ ಇದು ಸಾಧ್ಯವಾಗಲಿದೆಯೇ ಎಂಬುದು ಕಾದು ನೋಡಬೇಕಿದೆ.

ಯುಎಇಯಲ್ಲಿ ಸಿಲುಕಿರುವ ಸಾವಿರಾರು ವಲಸಿಗರಿಗೆ ಇದು ಒಳ್ಳೆಯ ಸುದ್ದಿಯಾಗಿದ್ದು, ಏರ್ ಅರೇಬಿಯಾ ಕೂಡ ಪ್ರತ್ಯೇಕ ಸೇವೆ ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಯುಎಇಗೆ ಆಗಮನಕ್ಕೆ ಅವಕಾಶವಿಲ್ಲ. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರವೇ ಹಿಂದಿನಂತೆ ವಿಮಾನಯಾನವು ಪುನರಾರಂಭಗೊಳ್ಳಲಿದೆ.

error: Content is protected !! Not allowed copy content from janadhvani.com