ಮಸ್ಕತ್: ಕೋವಿಡ್-19 ಸೋಂಕಿನಿಂದ ಒಮಾನಿನಲ್ಲಿ ಮೊದಲ ಮೃತ್ಯು ನಡೆದಿರುವುದಾಗಿ ಮಂಗಳವಾರ ವರದಿಯಾಗಿದೆ.
72 ವರ್ಷದ ಒಮಾನಿ ಪ್ರಜೆ ಕೊರೊನಾವೈರಸ್‌ನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಇದು ಸುಲ್ತನತ್ ಆಫ್ ಒಮಾನಿನಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಮೊದಲ ಮರಣ ಎಂದು ಸಚಿವಾಲಯ ಹೇಳಿದೆ.
ದೇಶದಲ್ಲಿ ಸೋಂಕಿತರ ಸಂಖ್ಯೆ 192 ಕ್ಕೆ ತಲುಪಿದೆ. ಏಪ್ರಿಲ್ ತಿಂಗಳ ಅರ್ಧದಲ್ಲಿ ಸೋಂಕಿತರ ಸಂಖ್ಯೆಯು ಅತ್ಯಂತ ಅಧಿಕವಾಗಲಿದೆ ಎಂದು ಅರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಉದ್ಯೋಗ ಹಾಗೂ ಕಲಿಕೆಯ ಭಾಗವಾಗಿ ವಿದೇಶಗಳಲ್ಲಿರುವ ಸ್ವದೇಶಿಗಳನ್ನು ತಾಯ್ನಾಡಿಗೆ ಕರೆತರಲಾಗುತ್ತಿದೆ, ಈ ದಿಸೆಯಲ್ಲಿ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ವರ್ಧಿಸಲಿದೆ ಎಂದು ಆರೋಗ್ಯ ಸಂಸ್ಥೆಯು ತಿಳಿಸಿದೆ.
ವರದಿ: ಕೆಎಸ್ಎಮ್. ಎಲಿಮಲೆ