ಮಂಗಳೂರು:ಕೋವಿಡ್ ಕೋರೋನ ವೈರಸ್ ಕಾರಣದಿಂದುಂಟಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಅನ್ನಕ್ಕೆ ಕಷ್ಟ ಪಡುವ ಬಡವರ,ನಿರಾಶ್ರಿತರ,ಬಿಕ್ಷಕುರ ತುರ್ತು ಸೇವೆಗೆ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ, ಎಸ್ಸೆಸ್ಸೆಫ್ ವೆಸ್ಟ್ ಝೋನ್ ಸಮಿತಿ ಸಿದ್ದವಾಗಿ,ಈಗಾಗಲೇ ಕಾರ್ಯಾಚರಿಸುತ್ತಾ ಇದೆ.
ಸುರತ್ಕಲ್ ಭಾಗದಲ್ಲಿ ಹೈದರಲಿ, ರಿಜ್ವಾನ್ ,ತನ್ಶೀರ್,ಹನೀಫ್ ಅಹ್ಸನಿ ನೇತೃತ್ದದ ಟೀಮ್ ಕಾರ್ಯಾಚರಿಸುತ್ತಾ ಆಹಾರ ಪೂರೈಸುತ್ತಾ ಇದೆ.,ಅದೇ ರೀತಿ ಮಂಗಳೂರು, ಉಳ್ಳಾಲ, ಬಂಟ್ವಾಳ, ಮುಡಿಪು, ಮೂಡಬಿದ್ರೆ ಭಾಗಗಳಲ್ಲಿಯೂ ವೆಸ್ಟ್ ಝೋನ್ ನಾಯಕರ ನೇತೃತ್ವದಲ್ಲಿ ಅಹಾರ ವಿತರಣೆ, ರಕ್ತದಾನ, ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಬೆಕಾದ ತುರ್ತು ಸೇವೆಗಳನ್ನು ಮಾಡಲು ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್ ಸಜ್ಜಾಗಿದೆ ಎಂದು ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕಿಸಬಹುದಾದ ನಂಬರುಗಳು-
8970831914 ,7899129784, 9900084313, 9036910140, 9663360112