ರಿಯಾದ್: ಕಾರ್ಮಿಕ ಸಚಿವಾಲಯವು ಸೌದಿ ಅರೇಬಿಯಾದ ಹೊಸ ಉದ್ಯಮಿಗಳಿಗೆ ತಕ್ಷಣ ವೀಸಾ ಲಭಿಸುವ ವಿಧಾನವನ್ನು ಪರಿಚಯಿಸಿದೆ. ಈ ಕ್ರಮವು ವಾಣಿಜ್ಯ ವಲಯದ ಪುನರುಜ್ಜೀವಗೊಳಿಸುವುದರ ಭಾಗವಾಗಿದೆ. ಸಚಿವಾಲಯದ ಖಿವಾ ಪೋರ್ಟಲ್ ಮೂಲಕ ತ್ವರಿತ ವೀಸಾಗಳು ಲಭ್ಯವಾಗಲಿದೆ. ವೀಸಾಗಳ ಸಂಖ್ಯೆಯನ್ನು ಕಂಪನಿಯ ಕಾರ್ಯಾಚರಣಾ ಪ್ರದೇಶದ ವ್ಯಾಪ್ತಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.
ಸೌದಿಯಲ್ಲಿ ಪ್ರಾರಂಭಿಸಲಾಗುವ ಯೋಜನೆಗಳಿಗೆ ಅಗತ್ಯ ಉದ್ಯೋಗಿಗಳನ್ನು ತ್ವರಿತವಾಗಿ ಪಡೆಯುವುದು ಹೊಸ ಯೋಜನೆಯ ಉದ್ದೇಶವಾಗಿದೆ. ವಿದೇಶದಿಂದ ಮಾನವ ಸಂಪನ್ಮೂಲಗಳ ಅಗತ್ಯವಿದ್ದರೆ ತಕ್ಷಣ ವೀಸಾ ಲಭ್ಯವಾಗಲಿದೆ. ಪ್ರಸ್ತುತ ಕೆಲಸದ ವೀಸಾಕ್ಕೆ ಅರ್ಜಿಯನ್ನು ನೀಡಿದ ಬಳಿಕ ಅದನ್ನು ಅಧ್ಯಯನ ಮಾಡಿದ ನಂತರವೇ ಕಾರ್ಮಿಕ ಸಚಿವಾಲಯವು ವೀಸಾವನ್ನು ನೀಡುತ್ತಿದ್ದವು. ಉದ್ಯೋಗದಾತ ನೇರವಾಗಿ ಸಚಿವಾಲಯಕ್ಕೆ ಹೋದರೆ ಮಾತ್ರ ವೀಸಾ ಲಭಿಸುತ್ತಿದ್ದವು. ಹೊಸ ವ್ಯವಸ್ಥೆಯು ಅರ್ಜಿದಾರರ ಅರ್ಹತೆ ಮತ್ತು ಅವಶ್ಯಕತೆಗಳನ್ನು ತಿಳಿದುಕೊಂಡು ಪೋರ್ಟಲ್ ಮೂಲಕ ವೀಸಾಗಳನ್ನು ಒದಗಿಸುತ್ತದೆ.
www.qiwa.sa ಮೂಲಕ ಅರ್ಜಿ ಸಲ್ಲಿಸಬಹುದು ವೀಸಾ ಲಭ್ಯತೆಗಾಗಿ ಕೆಲವು ಷರತ್ತುಗಳನ್ನು ಸಹ ಪೂರೈಸಬೇಕು. ಸಂಸ್ಥೆಯು ಪ್ರಾರಂಭಗೊಂಡು ಒಂದು ವರ್ಷ ಪೂರ್ಣಗೊಳ್ಳುವುದರೊಂದಿಗೆ, ಸ್ವದೇಶೀಕರಣ ಯೋಜನೆ ರೂಪಿಸಬೇಕು. ಕಳೆದ ಆರು ತಿಂಗಳ ಒಳಗೆ ಪ್ರಾರಂಭವಾದ ಕಂಪನಿಗಳಿಗೆ ತ್ವರಿತ ವೀಸಾಗಳನ್ನು ನೀಡಲಾಗುವುದು. ವೀಸಾಗಳ ಸಂಖ್ಯೆಯನ್ನು ಸಂಸ್ಥೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಸಚಿವಾಲಯ ನಿರ್ಧರಿಸುತ್ತದೆ. ಈ ಉದ್ದೇಶಕ್ಕಾಗಿ ಸಚಿವಾಲಯದ ಪ್ರತಿನಿಧಿಗಳು ಪರಿಶೀಲಿಸುವರು. ಹೊಸ ವೀಸಾ ಕಾರ್ಯಕ್ರಮವನ್ನು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಇಂಜಿನಿಯರ್ ಅಹ್ಮದ್ ಅಲ್‌ಜಾಹಿರಿ ಉದ್ಘಾಟಿಸಿದರು.