janadhvani

Kannada Online News Paper

ದುಬೈ: ಸಂಚಾರ ದಂಡದಲ್ಲಿ ಶೇ.100 ರಷ್ಟು ರಿಯಾಯ್ತಿ- ಅವಧಿ ವಿಸ್ತರಣೆ

ದುಬೈ: ಸಂಚಾರ ದಂಡದಲ್ಲಿ ಶೇ.100 ರಷ್ಟು ರಿಯಾಯ್ತಿ ನೀಡುವ ದುಬೈ ಪೊಲೀಸರ ಯೋಜನೆ ಈ ವರ್ಷವೂ ಮುಂದುವರಿಯಲಿದೆ. ವರ್ಷದುದ್ದಕ್ಕೂ ಕಾನೂನು ಉಲ್ಲಂಘಿಸದ ವಾಹನ ಚಾಲಕರಿಗೆ ಹಳೆಯ ದಂಡವನ್ನು ಸಂಪೂರ್ಣವಾಗಿ ವಜಾಗೊಳಿಸುವ ಯೋಜನೆ ಇದಾಗಿದೆ.

ಕಳೆದ ವರ್ಷ ಫೆಬ್ರವರಿ 6 ರಂದು ಸಹಿಷ್ಣುತೆ ವಾರ್ಷಿಕೋತ್ಸವದ ಅಂಗವಾಗಿ ದುಬೈ ಪೊಲೀಸರು ದಂಡವನ್ನು ಶೇ.100 ರಷ್ಟು ಕಡಿತಗೊಳಿಸುವ ಯೋಜನೆಯನ್ನು ಘೋಷಿಸಿದರು. ಮೂರು ತಿಂಗಳು ಉಲ್ಲಂಘನೆ ಮಾಡದೆ ವಾಹನ ಚಲಾಯಿಸಿದರೆ 25% ರಿಯಾಯಿತಿ ಇದೆ. ಆರು ತಿಂಗಳವರೆಗೆ ಮುಂದುವರಿದರೆ, 50% ವಿನಾಯಿತಿ ಮತ್ತು ಇಡೀ ವರ್ಷ ಉಲ್ಲಂಘಿಸದವರಿಗೆ 100% ದಂಡ ವಿನಾಯಿತಿ ನೀಡುವ ಯೋಜನೆಗೆ ಲಭಿಸಿದ ಪ್ರತಿಕ್ರಿಯೆ ಅಭೂತ ಪೂರ್ವವಾಗಿತ್ತು.

ಇದರಿಂದ 5,59,430 ವಾಹನ ಚಾಲಕರಿಗೆ ಅನುಕೂಲವಾಗಿದೆ. ಆಪೈಕಿ ಹೆಚ್ಚಿನವರು ಮಹಿಳೆಯರು ಎನ್ನಲಾಗಿದೆ. 4,44,661 ಮಹಿಳೆಯರಿಗೆ 100% ದಂಡ ವಿನಾಯಿತಿ ದೊರೆತಿದೆ. 1,14,769 ಪುರುಷರು ಕೂಡ ವಿನಾಯಿತಿ ಪಡೆದಿದ್ದಾರೆ. ದುಬೈ ಪೊಲೀಸರು 54.6 ಕೋಟಿ ರೂ. ದಂಡವನ್ನು ವಜಾಗೊಳಿಸಿದ್ದಾರೆ.

ದಂಡ ವಿನಾಯಿತಿ ಪಡೆಯುವ ಉದ್ದೇಶದಿಂದ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿದ ಕಾರಣ ಅಪಾಯವು ಗಣನೀಯವಾಗಿ ಕಡಿಮೆಯಾಗಿದೆ. ಅಪಘಾತಗಳು ಶೇಕಡಾ 38 ರಷ್ಟು ಕಡಿಮೆ ದಾಖಲಾಗಿತ್ತು. ಅಪಘಾತ ನಿವಾರಣಾ ವೆಚ್ಚದಲ್ಲಿ ದುಬೈ 61 ಕೋಟಿ ದಿರ್ಹಂ ಉಳಿತಾಯ ಮಾಡಿದೆ. ಈ ಅಂಕಿಅಂಶಗಳನ್ನು ದುಬೈ ಪೊಲೀಸ್ ಇಲಾಖೆಯ ಉಪನಿರ್ದೇಶಕ ಕರ್ನಲ್ ಜುಮಾ ಸಲೀಮ್ ಬಿನ್ ಸುವೈದಾನ್ ಹಂಚಿಕೊಂಡಿದ್ದಾರೆ.

error: Content is protected !! Not allowed copy content from janadhvani.com