ಮಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯ ಈಶಾನ್ಯದಲ್ಲಿ ಮಾನವ ರಕ್ತ ಹರಿಯಲಾರಂಭಿಸಿದೆ, ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸಕ್ಕೆ 20 ಜನ ಬಲಿಯಾಗಿದ್ದಾರೆ, ತಮ್ಮ ಕಣ್ಣೆದುರಿಗೇ ಅಕ್ರಮ ನಡೆಯುತ್ತಿದ್ದರೂ ಕೈ ಕಟ್ಟಿ ಆರಾಮವಾಗಿ ಗಲಭೆ ಕೋರರಿಗೆ ಪ್ರಚೋದನೆ ನೀಡುವಂತೆ ವರ್ತಿಸುತ್ತಿರುವ ಪೋಲಿಸರ ನಡೆ ಶೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪೋಲೀಸರ ನಡೆಯು ಅತ್ಯಂತ ಕಳವಳಕಾರಿಯೂ ಖಂಡನೀಯವೂ ಆಗಿದೆ.
ರಾಜಧಾನಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ದಿಲ್ಲಿ ಪೋಲೀಸ್ ಮತ್ತು ಕೇಂದ್ರ ಸರಕಾರದ ಅನಾಸ್ಥೆಯೇ ಕಾರಣ. ರಾಜಧಾನಿಯಲ್ಲೇ ನಡೆಯುವ ನರಮೇಧವನ್ನು ಹತೋಟಿಗೆ ತರಲು ಸಾಧ್ಯವಾಗದ ಕೇಂದ್ರ ಸರಕಾರವು ರಾಷ್ಟ್ರವನ್ನು ಹೇಗೆ ಸಂರಕ್ಷಿಸೀತು..?
ಕೇವಲ ರಾಜಕೀಯ ಲಾಭಗೋಸ್ಕರ ದೇಶದ ಜನರೆಡೆಯಲ್ಲಿ ಧಾರ್ಮಿಕ ವಿಭಜನೆಯನ್ನುಂಟುಮಾಡಿ, ಕೋಮು ವಿಷಬೀಜವನ್ನು ಬಿತ್ತಿ ಬಡ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಕೇಂದ್ರ ಸರಕಾರದ ನಡೆಯು ಖಂಡನೀಯವಾಗಿದೆ.
ಜಾತಿ ರಾಜಕೀಯವನ್ನು ಬಿಟ್ಟು, ಗಲಭೆಕೋರರನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳುವತ್ತ ಕೇಂದ್ರ ಸರಕಾರ ಗಮನ ಹರಿಸಬೇಕಾಗಿದೆ. ಗಲಭೆಯಲ್ಲಿ ನಿರಾಶ್ರಿತರಾದವರಿಗೆ ನ್ಯಾಯ ಒದಗಿಸಿ, ದೇಶದಲ್ಲಿ ಶಾಂತಿ ನೆಲೆ ನಿಲ್ಲುವಂತೆ ಅಗತ್ಯ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕಿದೆ. ಇಲ್ಲದ್ದಲ್ಲಿ ನೊಂದವರ ಶಾಪವು ಆಡಳಿತವರ್ಗದ ಮೇಲೆರಗಲಿದೆ ಖಂಡಿತ.