janadhvani

Kannada Online News Paper

ದಿಲ್ಲಿ ಹಿಂಸಾಚಾರ ಖಂಡಿಸಿ ದ.ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ SSF ನಿಂದ ಪ್ರತಿಭಟನೆ

ಮಂಗಳೂರು: ಕೇಂದ್ರ ಸರ್ಕಾರದ ಜಾತ್ಯಾತೀತ ವಿರೋಧಿ ಕಾಯ್ದೆ CAA, NRC ವಿರುದ್ಧ ರಾಷ್ಟ್ರ ವ್ಯಾಪ್ತಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರನ್ನೆಲಾದ ದುಷ್ಕರ್ಮಿಗಳು ನಡೆಸುತ್ತಿರುವ ಹಿಂಸೆಯನ್ನು SSF ದ.ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿ ಜಿಲ್ಲಾ ವ್ಯಾಪ್ತಿಯ 11 ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಹಲವು ಜೀವಗಳನ್ನು ಬಲಿ ಪಡೆಯುತ್ತಿರುವ, ಗಾಯಾಳುಗಳ ಸಂಖ್ಯೆ ಹೆಚ್ಚುತ್ತಿರುವ ಈ ಅಕ್ರಮಗಳು ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಸುತ್ತಿರುವ ಪೂರ್ವ ನಿಯೋಜಿತ ಕೃತ್ಯವಾಗಿದೆ. ಜೀವರಕ್ಷಣೆಗಾಗಿ ನಾಗರಿಕರು ಅಂಗಲಾಚುವ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ.ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಅಕ್ರಮವಾಗಿ ಅಮಾನವೀಯತೆಗೆ ದೆಹಲಿ ಸಾಕ್ಷಿಯಾಗುತ್ತಿದೆ.

ಇಷ್ಟೊಂದು ಅಪಾಯಕಾರಿ ಹಂತಕ್ಕೆ ತಲುಪುತ್ತಿರುವ ಈ ಸಂಘರ್ಷವನ್ನು ನಿಯಂತ್ರಿಸಲು ಇಲ್ಲಿನ ಭದ್ರತಾ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಮಾತ್ರವಲ್ಲ, ಪೋಲೀಸರು ಪ್ರತಿಭಟನಾಕಾರರನ್ನು ಮಾತ್ರ ಗುರಿಯಾಗಿಸಿ ಅಶ್ರುವಾಯು, ಗೋಲಿಬಾರ್ ನಡೆಸುವುದು, ಗುಂಡು ಹಾರಿಸುವುದು ವೀಡಿಯೋದಲ್ಲಿ ಕಾಣುತ್ತಿದೆ. ದುಷ್ಕರ್ಮಿಗಳು ಪೋಲಿಸರ ಸಹಕಾರದೊಂದಿಗೆ ಅಮಾಯಕರ ಮೇಲೆ ಶೂಟೌಟ್ ಮಾಡುತ್ತಿರುವುದು ಅತ್ಯಂತ ದೊಡ್ಡ ಅನ್ಯಾಯವಾಗಿದ್ದು ಕೇಂದ್ರ ಸರಕಾರ ಇದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಸಂಘರ್ಷಗಳು ಮತ್ತಷ್ಟು ಹಿಂಸಾತ್ಮಕ ರೂಪಕ್ಕೆ ತಿರುಗಳು ಕಾರಣವಾಗುತ್ತಿದೆ. ದೆಹಲಿಯಲ್ಲಿ ನಢಯುತ್ತಿರುವ ಈ ಹಿಂಸಾತ್ಮಕ ಅಕ್ರಮವನ್ನು ಖಂಡಿಸಿ SSF ದ.ಕನ್ನಡ ಜಿಲ್ಲಾ ವ್ಯಾಪ್ತಿಯ ಹಲವು ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ

error: Content is protected !! Not allowed copy content from janadhvani.com