janadhvani

Kannada Online News Paper

ಚಿತ್ರದುರ್ಗ ,ಫೆ.5: ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಉತ್ತರ ಕರ್ನಾಟಕದಲ್ಲಿ ಧಾರ್ಮಿಕ ಚಳವಳಿಗೆ ನೇತೃತ್ವ ನೀಡುತ್ತಿರುವ ಇಹ್ಸಾನ್ ದಾಈಗಳಿಗೆ ದ್ವಿಚಕ್ರ ವಾಹನವನ್ನು ಹಸ್ತಾಂತರ ಮಾಡಲಾಯಿತು.

ಉತ್ತರ ಕರ್ನಾಟಕದ ಬಳ್ಳಾರಿ, ಹಾವೇರಿ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಗದಗ, ಧಾರವಾಡ, ಬಾಗಲಕೋಟೆ ಹಾಗೂ ಬಿಜಾಪುರ ಜಿಲ್ಲೆಗಳ ಧಾರ್ಮಿಕತೆಯ ಕೊರತೆ ಇರುವ ಪ್ರದೇಶಗಳಲ್ಲಿ ಸುಮಾರು ಏಳೆಂಟು ವರ್ಷಗಳಿಂದ ಇಹ್ಸಾನ್ ಕಾರ್ಯಾಚರಣೆಗಳು ಅತ್ಯಂತ ಸಕ್ರಿಯವಾಗಿ ನಡೆಯುತ್ತಿದ್ದು ಅಲ್ಲಿನ ಹಳ್ಳಿಗಲ್ಲಿ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಸುಗಮ ಸಂಚಾರಕ್ಕಾಗಿ ದ್ವಿಚಕ್ರ ವಾಹನಗಳ ಅಗತ್ಯವಿತ್ತು. ಯುಎಇ ಕೆಸಿಎಫ್ ನಾಯಕರು ಹಾಗೂ ಕಾರ್ಯಕರ್ತರು ಈ ನಿಟ್ಟಿನಲ್ಲಿ ಸ್ಪಂದಿಸಿ ದ್ವಿಚಕ್ರ ವಾಹನಗಳ ವ್ಯವಸ್ಥೆ ಮಾಡಿದ್ದು ಮೊದಲ ಹಂತವಾಗಿ ಆರು ನೂತನ ದ್ವಿಚಕ್ರ ವಾಹನಗಳನ್ನು ಹಸ್ತಾಂತರಿಸಲಾಯಿತು.

ಇಹ್ಸಾನ್ ಕರ್ನಾಟಕ ಅಧ್ಯಕ್ಷ NKM ಶಾಫೀ ಸಅದಿ ಬೆಂಗಳೂರು ಹಾಗೂ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಜಿ ಶೈಖ್ ಬಾವಾ ಅಬುಧಾಬಿ ಇಹ್ಸಾನ್ ದಾಈಗಳಿಗೆ ಹಸ್ತಾಂತರ ಮಾಡಿದರು.
ಇಹ್ಸಾನ್ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ಅಬ್ದುಲ್ ಹಮೀದ್ ಮುಸ್ಲಿಯಾರ್ ನಗರ, ಬಿಎ ಇಬ್ರಾಹಿಂ ಸಖಾಫಿ, ಆದಂ ಸಖಾಫಿ ಚಿತ್ರದುರ್ಗ ಹಾಗೂ ಇಹ್ಸಾನ್ ದಾಈಗಳು ಉಪ‌ಸ್ಥಿತರಿದ್ದರು‌.

error: Content is protected !!
%d bloggers like this: