ಮಂಗಳೂರಿನ ಹೃದಯ ಭಾಗದ ಪಂಪ್ವೆಲ್‌ನ ಮೇಲ್ಸೇತುವೆಯ ಕಾಮಗಾರಿಯನ್ನು ಒಂದು ದಶಕದ ಬಳಿಕ ಪೂರ್ತಿಗೊಳಿಸಿ ಸಂಸದ ನಳಿನ್ ಕುಮಾರ್ ಶುಕ್ರವಾರ ಲೋಕಾರ್ಪಣೆ ಮಾಡಿದರು.
ಬರಿ 600 ಮೀ ಉದ್ದದ ಬ್ರಿಡ್ಜ್‌ನ ಕಾಮಗಾರಿ ಪೂರ್ತಿಗೊಳಿಸುವುದಕ್ಕೆ ನಮ್ಮ ಸಂಸದರಿಗೆ ದಶಕಗಳ ಕಾಲ ಮತ್ತು ಮೂರು ಬಾರಿ ಸಂಸದರಾಗಬೇಕಾಯಿತು.
ನಾನು ವೃತ್ತಿಯಲ್ಲಿರುವ ಸೌದಿ ಅರೇಬಿಯಾದದಿಂದ ಬಹ್ರೇನ್ ಸಂಪರ್ಕಿಸಲು ಅರಬಿ ಸಮುದ್ರದ ಮೇಲೆ ಬೃಹತ್ ಸೇತುವೆಯೊಂದನ್ನು ಅಂದಿನ ಸೌದಿ ಅರೇಬಿಯಾದ ದೊರೆ ಮರ್ಹೂಂ(ದಿವಗಂತ) ಕಿಂಗ್ ಫಹದ್ ಬಿನ್ ಅಬ್ದುಲ್ ಅಝೀಝ್ ನಿರ್ಮಿಸುತ್ತಾರೆ.
1981ರ ಸಪ್ಟೆಂಬರ್ 29 ರಂದು ಆರಂಭಗೊಳ್ಳುವ ಈ ಸೇತುವೆಯ ಕಾಮಗಾರಿ 1986 ರ ನವಂಬರ್ 12 ರಂದು ಪೂರ್ಣಗೊಂಡು 1986 ನವಂಬರ್ 25 ರಂದು ಲೋಕಾರ್ಪಣೆಗೊಳ್ಳುತ್ತದೆ.
ಈ ಸೇತುವೆಯ ಉದ್ದ ಸರಿ ಸುಮಾರು 25 ಕಿ.ಮೀ.ನಷ್ಟಿದ್ದರೆ ಅಗಲ 23 ಮೀ.ನಷ್ಟಿದೆ.
ಈ ಬೃಹತ್ ಯೋಜನೆಯನ್ನು ಸೌದಿ ಸರಕಾರ ಬರಿ 5 ವರ್ಷ ಮತ್ತು 33 ದಿನಗಳಲ್ಲಿ ಪೂರ್ತಿಗೊಳಿಸುತ್ತದೆ.
( ಅದು ಕೂಡ ಕಡಲ ಮೇಲೆ.)
ನಾಲ್ಕು ವರ್ಷಗಳ ಹಿಂದೆ ಸೌದಿ ಅರೇಬಿಯಾದಿಂದ ಬಹ್ರೇನ್ ಸಂದರ್ಶನಕ್ಕೆ ತೆರಳಿದಾಗ ‘ಬಹ್ರೇನ್ ಬ್ರಿಡ್ಜ್’ನ ಉದ್ದ,ಸಂಚರಿಸುವವರಿಗಾಗಿ ವಿದ್ಯುತ್ ಚಿತ್ತಾರ ಮತ್ತು ಬ್ರಿಡ್ಜ್‌ನ ಸೌಂದರ್ಯ ನನ್ನಲ್ಲಿ ಅಚ್ಚರಿ ಮೂಡಿಸಿತ್ತು.
ಪಂಪ್ವೆಲ್ ಮೇಲ್ಸೇತುವೆ ನಿರ್ಮಾಣಕ್ಕೆ ಸಮುದ್ರ,ಬೆಟ್ಟ ಗುಡ್ಡಗಾಡುಗಳನ್ನು ಹಗೆಯ ಬೇಕಾಗಿ ಬಂದಿಲ್ಲ.
ಈ ಹಿಂದೆ ಪಂಪ್ವೆಲ್ ಸರ್ಕಲ್‌ನಲ್ಲಿದ್ದ ‘ಕಳಸ’ವನ್ನು ತೆರವುಗೊಳಿಸುವುದೊಂದೆ ಕೆಲಸವಿತ್ತು. ಅದೂ ಅಲ್ಲದೇ ಮೇಲ್ಸೇತುವೆಯ ಉದ್ದ ಬರಿ 600 ಮೀ.ಮಾತ್ರವಾಗಿತ್ತು.
ಈ ಸಣ್ಣ ಯೋಜನೆಯನ್ನು ಸಂಸದ ನಳಿನ್ ಕುಮಾರ್‌ರವರಿಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದಕ್ಕೆ 10 ವರ್ಷಗಳ ಕಾಲ ಬೇಕಾಗಿರುವುದು ಅತ್ಯಂತ ನಾಚಿಕಗೇಡಿನ ಸಂಗತಿ
ಮಾತ್ರವಲ್ಲ,ಇದು ಸಂಸದರ ಅಧಿಕಾರ ದುರುಪಯೋಗ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಹತ್ತು ವರ್ಷಗಳ ಕಾಮಗಾರಿಯಲ್ಲಿ ಬಹ್ರೇನ್ ಬ್ರಿಡ್ಜ್‌ನ ಸೌಂದರ್ಯದ ಮುಂದೆ ಪಂಪ್ವೆಲ್ ಬ್ರಿಡ್ಜ್ ಡಬಲ್ ಶೂನ್ಯ.!
ಇಸ್ಹಾಕ್ ಸಿ.ಐ.ಫಜೀರ್.