janadhvani

Kannada Online News Paper

ರಿಯಾದ್: ವ್ಯವಹಾರ ಕೇಂದ್ರಗಳನ್ನು ಗುರಿಯಾಗಿಸಿ, ಕಳ್ಳತನ ನಡೆಸಿದ ತಂಡವನ್ನು ರಿಯಾದ್ ಪೊಲೀಸರು ಬಂಧಿಸಿದ್ದಾರೆ. ರಾಜಧಾನಿಯ ವಿವಿಧ ಕಡೆ ಕಳ್ಳತನ ನಡೆಸಿದ ಮೂವರ ತಂಡವನ್ನು ಬಂಧಿಸಲಾಗಿದ್ದು, ಅವರು ಸಿರಿಯಾ, ಫಲಸ್ತೀನ್, ಯಮನ್ ದೇಶಗಳಿಂದ ಬಂದವರು ಎನ್ನಲಾಗಿದೆ.

ಮಧ್ಯ ರಿಯಾದ್, ಉತ್ತರ ರಿಯಾದ್‌ಗಳಲ್ಲಿ ಕಾರ್ಯಾಚರಿಸುವ ವ್ಯಾಪಾರ ಕೇಂದ್ರಗಳಲ್ಲಿನ ಸಿಬ್ಬಂದಿಯನ್ನು ಬೆದರಿಸಿ ಅವರು ಹಣ ವಸೂಲಿ ಮಾಡುತ್ತಿದ್ದರು. ಆರೋಪಿಗಳ ವಿರುದ್ದ ಕಾನೂನಿನ ಅನುಸಾರ ಶಿಕ್ಷಾ ಕ್ರಮಗಳನ್ನು ಕೈಗೊಂಳ್ಳಲಾಗುತ್ತಿದೆ ಎಂದು ರಿಯಾದ್ ಪೊಲೀಸರು ತಿಳಿಸಿದ್ದಾರೆ.

error: Content is protected !!
%d bloggers like this: