janadhvani

Kannada Online News Paper

ವಿದೇಶಿಯರು ಅಬ್ಶೀರ್ ನಲ್ಲಿ ಕೂಡಲೇ ನೋಂದಾಯಿಸಿಕೊಳ್ಳಬೇಕು- ಜವಾಝಾತ್

ರಿಯಾದ್: ವಿದೇಶಿಯರೆಲ್ಲರೂ ಸೌದಿಯ ಅಬ್ಶೀರ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಜವಾಝಾತ್ ಹೇಳಿದೆ. ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದವರಿಗೆ ವಿವಿಧ ಸೇವೆಗಳು ಲಭ್ಯವಿರುವುದಿಲ್ಲ. 11 ದಶಲಕ್ಷ ಜನರು ನೋಂದಾಯಿಸಿಕೊಂಡಿದ್ದು, ಸೌದಿ ಗೃಹ ಸಚಿವಾಲಯ ಸ್ಥಾಪಿಸಿರುವ ಎಲೆಕ್ಟ್ರಾನಿಕ್ ಪೋರ್ಟಲ್ ಅಬ್ಶೀರ್‌ನಲ್ಲಿ ಇನ್ನೂ ನೋಂದಣಿ ಮಾಡದ ವಿದೇಶಿಯರು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಜವಾಝಾತ್ ಘಟಕ ತಿಳಿಸಿದೆ.

ನೋಂದಣಿಯನ್ನು ಪೂರ್ಣಗೊಳಿಸುವುದರಿಂದ ಉದ್ಯೋಗದಾತರು ಹಲವಾರು ಸೇವೆಗಳನ್ನು ಪಡೆಯಬಹುದು. ಇದಲ್ಲದೆ, ಪಾಸ್‌ಪೋರ್ಟ್, ಉದ್ಯೋಗ ಮತ್ತು ಟ್ರಾಫಿಕ್ ಮುಂತಾದ ವಿವಿಧ ವರ್ಗದ ಸೇವೆಗಳನ್ನು ಸುಲಭವಾಗಿ ಪಡೆಯಲು ಇದು ಅನುಕೂಲವಾಗಲಿದೆ. ವಿವಿಧ ಕಚೇರಿಗಳಿಗೆ ನೇರವಾಗಿ ಹೋಗುವ ಬದಲು ವಿವಿಧ ಕೆಲಸಗಳನ್ನು ಪೋರ್ಟಲ್ ಮೂಲಕ ಮಾಡಿ ಸಮಯ ಮತ್ತು ಶ್ರಮವನ್ನು ಉಳಿಸಲು ಸಾಧ್ಯವಿದೆ ಎಂದು ಪಾಸ್‌ಪೋರ್ಟ್ ನಿರ್ದೇಶನಾಲಯ ತಿಳಿಸಿದೆ.

ಗೃಹ ಸಚಿವಾಲಯದ ಎಲ್ಲಾ ಸೇವೆಗಳನ್ನು ಆನ್‌ಲೈನ್ ಮಾಡುವ ಸಲುವಾಗಿ ಹಲವಾರು ಹೊಸ ಸೇವೆಗಳನ್ನು ಸೇರಿಸಲಾಗಿದೆ. ಅಬ್ಶೀರ್‌ನಲ್ಲಿ ಈಗಾಗಲೇ 11 ದಶಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ವ್ಯಕ್ತಿಗಳು, ಅವಲಂಬಿತರು, ಖಾಸಗಿ ಕಂಪನಿಗಳು ಮತ್ತು ಉದ್ಯೋಗಿಗಳ ಸೇವೆಗಳನ್ನು ಹೊರತುಪಡಿಸಿ, ಸರಕಾರಿ ಸಂಸ್ಥೆಗಳ ಸಹ ಸೇವೆಗಳನ್ನು ಕೂಡ ಅಬ್ಶೀರ್ ಒದಗಿಸುತ್ತವೆ.

error: Content is protected !! Not allowed copy content from janadhvani.com