janadhvani

Kannada Online News Paper

ಮದೀನಾ: ಪ್ರವಾದಿ ನಗರವಾದ ಮದೀನಾದ ಪವಿತ್ರ ಖುರ್‌ಆನ್ ಪ್ರಕಟಗೊಳ್ಳುವ ಕಿಂಗ್ ಫಹದ್ ಕಾಂಪ್ಲೆಕ್ಸ್‌ನಿಂದ1,230,949 ಪ್ರತಿಗಳನ್ನು ಡಿಸೆಂಬರ್‌ನಲ್ಲಿ ವಿತರಿಸಲಾಗಿದೆ. ಜನವರಿಯಲ್ಲಿ ಬಿಡುಗಡೆಯಾದ ವರದಿಯಲ್ಲಿ, ಕಂಪನಿಯು ಕಳೆದ 36 ವರ್ಷಗಳಲ್ಲಿ 32 ಕೋಟಿ 54 ಲಕ್ಷ ಪ್ರತಿಗಳನ್ನು ವಿತರಿಸಿದೆ. ಪ್ರವಾದಿಯ ನಗರಕ್ಕೆ ಭೇಟಿ ನೀಡುವ ಎಲ್ಲಾ ಯಾತ್ರಿಕರಿಗೂ ಖುರ್‌ಆನ್ ಉಚಿತವಾಗಿ ನೀಡಲಾಗುತ್ತಿದ್ದು, ಸಾವಿರಾರು ಯಾತ್ರಿಕರು ದಿನಂಪ್ರತಿ ಭೇಟಿ ನೀಡುತ್ತಾರೆ.

ಖುರ್‌ಆನ್ ಮುದ್ರಣ ಮತ್ತು ಪ್ರಚಾರದ ಉದ್ದೇಶಕ್ಕಾಗಿ ಸೌದಿ ಅರೇಬಿಯಾದ ಅಂದಿನ ರಾಜ ಫಹದ್ ಅವರು ಫಹದ್ ಕಾಂಪ್ಲೆಕ್ಸ್ ಅನ್ನು 1984 ರಲ್ಲಿ ಸ್ಥಾಪಿಸಿದರು. ಇದು ವಿಶ್ವದ ಅತಿದೊಡ್ಡ ಪವಿತ್ರ ಖುರ್‌ಆನ್ ಮುದ್ರಣಾಲಯವಾಗಿದ್ದು, ಇಲ್ಲಿ ವಾರ್ಷಿಕವಾಗಿ ವಿವಿಧ ಗಾತ್ರದ 10 ದಶಲಕ್ಷಕ್ಕೂ ಹೆಚ್ಚು ಖುರ್‌ಆನ್ ಪ್ರತಿಗಳನ್ನು ವಿತರಿಸಲಾಗುತ್ತದೆ.

ಕ್ಯಾಲಿಗ್ರಫಿ ತಯಾರಕರ ಅಂತರ್‌ರಾಷ್ಟ್ರೀಯ ಸಮ್ಮೇಳನ, ವಿವಿಧ ಪ್ರದರ್ಶನಗಳು, ಸೆಮಿನಾರ್ಗಳು, ಖುರ್‌ಆನ್ ಮುದ್ರಣದ ಆಧಾರದ ಮೇಲೆ ಸಿದ್ಧಪಡಿಸಿದ ಪ್ರಬಂಧಗಳ ಪ್ರಸ್ತುತಿ, ಮುದ್ರಣ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳ ಪ್ರದರ್ಶನ ಮತ್ತು ಅರಬಿ ಹಸ್ತಪ್ರತಿ ಕಲೆಯ ಅರಬಿಕ್ ಕ್ಯಾಲಿಗ್ರಫಿ ಪ್ರದರ್ಶನ. ಇದಲ್ಲದೆ, ಕುರ್‌ಆನ್ ಮುದ್ರಣ ಉದ್ಯಮ, ಇತಿಹಾಸ, ತಂತ್ರಜ್ಞಾನ ಮತ್ತು ಕಚ್ಚಾ ವಸ್ತುಗಳ ಬಗ್ಗೆ ವೈಜ್ಞಾನಿಕ ಅವಲೋಕನಗಳಂತಹ ವಿವಿಧ ವಿಚಾರ ಸಂಕಿರಣಗಳನ್ನು ಸಹ ಇಲ್ಲಿ ಆಯೋಜಿಸಲಾಗುತ್ತದೆ.

error: Content is protected !!
%d bloggers like this: