janadhvani

Kannada Online News Paper

ಉಜಿರೆ: ಮುಹಿಯುದ್ದೀನ್ ಜುಮಾ ಮಸ್ಜಿದ್ ಹಳೆಪೇಟೆ ಉಜಿರೆ ಇದರ ಆಶ್ರಯದಲ್ಲಿ SYS & SSF ಉಜಿರೆ ವತಿಯಿಂದ ತಾಜುಲ್ ಅನುಸ್ಮರಣೆ ಹಾಗೂ 3 ದಿನಗಳ ಧಾರ್ಮಿಕ ಮತ ಪ್ರವಚನವು ಜನವರಿ 10,11,12 ದಿನಾಂಕಗಳಲ್ಲಿ MJM ಹಳೆಪೇಟೆ ಉಜಿರೆ ವಠಾದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು SYS ಉಜಿರೆ ಬ್ರಾಂಚ್ ಅಧ್ಯಕ್ಷರಾದ ಬಹು| ಹಾಜಿ ಹೈದರ್ ಮದನಿ ವಹಿಸಿದ್ದರು. ಮುಹಿಯುದ್ದೀನ್ ಜುಮಾ ಮಸ್ಜಿದ್ ಖತೀಬರಾದ ಬಹು| ಅಲ್‌ಹಾಜ್ B.A ಅಬ್ಬಾಸ್ ಮದನಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಹು| ಅಸ್ಸಯ್ಯಿದ್ ಕಿಫಾಯಿಯ್ಯ ಅಲ್-ಬುಖಾರಿ ತಂಙಳ್,ಮಲಪ್ಪುರಂ ದುಃಅ ನೇತೃತ್ವ ನೀಡಿದರು. ಸುನ್ನಿ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಬಹು| ಅಸ್ಸಯ್ಯಿದ್ ಇಸ್ಮಾಯಿಲ್ ಅಲ್‌ಹಾದಿ ಮದನಿ ತಂಙಳ್ ಉಜಿರೆ ಆಶಂಸ ಭಾಷಣ ಮಾಡಿದರು.

10 ಜನವರಿ 2020ನೇ ಶುಕ್ರವಾರ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷರಾದ ಬಹು| ಅಲ್‌ಹಾಜ್ ಅಬೂಸುಫಿಯಾನ್ H.I ಇಬ್ರಾಹೀಂ ಮದನಿ, 11 ಜನವರಿ 2020ನೇ ಶನಿವಾರ ಬಹು| ಹಮೀದ್ ಫೈಝಿ ಕಿಲ್ಲೂರು, 12 ಜನವರಿ 2020ನೇ ಅದಿತ್ಯವಾರ ಬಹು| ಹಂಝ ಮದನಿ ಮಿತ್ತೂರು ಮುಖ್ಯ ಪ್ರಭಾಷಣ ಮಾಡಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ S.M ಕೋಯ ತಂಙಳ್ ಉಜಿರೆ, ಮುಹಿಯುದ್ದೀನ್ ಜುಮಾ ಮಸ್ಜಿದ್ ಹಳೆಪೇಟೆ ಉಜಿರೆ ಅಧ್ಯಕ್ಷರಾದ B.M ಹಮೀದ್ ಹಾಜಿ, ಪ್ರ.ಕಾರ್ಯದರ್ಶಿ A.M ಶರೀಫ್, ಕೋಶಾಧಿಕಾರಿ ಇಬ್ರಾಹೀಂ ವಾಫಿರ್, BJM ಉಜಿರೆ ಟೌನ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ART,KJM ಕಕ್ಕೆಜಾಲ್ ಅಧ್ಯಕ್ಷರಾದ ಚೆರಮೋನು,SYS ಉಜಿರೆ ಸೆಂಟರ್ ಅಧ್ಯಕ್ಷರಾದ ಅಬ್ದುರ್ರಶೀದ್ ಬಲಿಪಾಯ ನೆರಿಯ, ಉಪಾಧ್ಯಕ್ಷರಾದ ಮುಹಿಯುದ್ದೀನ್ ನಜಾತ್ ಕುಂಟಿನಿ, ಪ್ರ.ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್ ಉಜಿರೆ, ಕೋಶಾಧಿಕಾರಿ ಇಬ್ರಾಹೀಂ ಅತ್ತಾಜೆ, ಕಾರ್ಯದರ್ಶಿ ಅಶ್ರಫ್ KCF, SSF ಉಜಿರೆ ಸೆಕ್ಟರ್ ಅಧ್ಯಕ್ಷರಾದ ಇಕ್ಬಾಲ್ ಮಾಚಾರು, ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಬೀನ್ ಉಜಿರೆ,MJM ಉಜಿರೆ ಬಿಲ್ಡಿಂಗ್ ಕಮಿಟಿ ಅಧ್ಯಕ್ಷರಾದ ಮುಹಮ್ಮದ್ Rtd DFO,ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ಜಿಲ್ಲಾ ಸದಸ್ಯ B.M ಹನೀಫ್,SYS ಉಜಿರೆ ಬ್ರಾಂಚ್ ಪ್ರ.ಕಾರ್ಯದರ್ಶಿ ಹಾರಿಸ್ AtoZ,ಕೋಶಾಧಿಕಾರಿ B.M ಹುಸನಬ್ಬ,ಉಪಾಧ್ಯಕ್ಷ ಹುಸೈನಾರ್ ನ್ಯಾಷನಲ್, ಕಾರ್ಯದರ್ಶಿ ಅಶ್ರಫ್ M.H, ಮುಹಿಯುದ್ದೀನ್ ಜುಮಾ ಮಸ್ಜಿದ್ ಉಜಿರೆ ಸ್ವಲಾತ್ ಕಮಿಟಿ ಅಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ನ್ಯಾಷನಲ್, SSF ಉಜಿರೆ ಯುನಿಟ್ ಅಧ್ಯಕ್ಷರಾದ ಆಸಿಫ್ S.A, ಪ್ರ.ಕಾರ್ಯದರ್ಶಿ ಸಲ್ಮಾನ್ S.A, ಅಲ್- ಅಮೀನ್ ಯಂಗ್‌ಮೆನ್ಸ್ ಹಳೆಪೇಟೆ ಉಜಿರೆ ಅಧ್ಯಕ್ಷರಾದ ಸಿದ್ದೀಕ್ ವಾಫಿರ್, ಪ್ರ.ಕಾರ್ಯದರ್ಶಿ ಅಬ್ದುರ್ರಹ್ಮಾನ್, SYS ಅತ್ತಾಜೆ ಬ್ರಾಂಚ್ ಅಧ್ಯಕ್ಷರಾದ ಆಸಿಫ್ ಅತ್ತಾಜೆ,SYS ಕಕ್ಯಾನ ಬ್ರಾಂಚ್ ಅಧ್ಯಕ್ಷರಾದ ಯಾಕೂಬ್ ಕಕ್ಯಾನ, ಮುಹಮ್ಮದ್ KSRTC, SSF ಅತ್ತಾಜೆ ಯುನಿಟ್ ಅಧ್ಯಕ್ಷರಾದ ಮಜೀದ್, ಪ್ರ.ಕಾರ್ಯದರ್ಶಿ ಝುಬೈರ್, SSF ಕಕ್ಕೆಜಾಲು ಯುನಿಟ್ ಅಧ್ಯಕ್ಷರಾದ ಮುಸ್ತಫಾ ಹಾಗೂ SYS & SSF ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಎಂ.ಎಂ.ಉಜಿರೆ.

error: Content is protected !!
%d bloggers like this: