janadhvani

Kannada Online News Paper

ಉಸ್ತಾದರ ಮೇಲೆ ದೇಶದ್ರೋಹ ಪ್ರಕರಣ ದಾಖಲು, ಮುಸ್ಲಿಮರ ಒಗ್ಗಟ್ಟನ್ನು ಮುರಿಯುವ ಷಡ್ಯಂತ್ರ – ಸುನ್ನೀ ಸಾಹಿತ್ಯ ಮಂಡಳಿ

ಮಂಗಳೂರು : NRC, CAA ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟಿಸಲು ಅನುಮತಿ ನೀಡದಿದ್ದಾಗ ಮುಸ್ಲಿಂ ಸೆಂಟ್ರಲ್ ಕಮಿಟಿಯು ನಿರಂತರವಾಗಿ ಪಟ್ಟು ಹಿಡಿದಿದ್ದರೂ ಅನುಮತಿಯನ್ನು ನೀಡಲು ಹಿಂದೇಟು ಹಾಕಲಾಗಿತ್ತು.

ಕೊನೆಗೆ ಇಲಾಖೆಯ ಅನುಮತಿ ನಿರಾಕರಣೆಯ ಕಾರಣದಿಂದ ಸೆಂಟ್ರಲ್ ಕಮಿಟಿಯು ಅಡ್ಯಾರ್ ಕಣ್ಣೂರಿನಲ್ಲಿ ಪ್ರತಿಭಟನೆಯನ್ನು ಕೈಗೊಂಡ ನಿರ್ಧಾರ ಪ್ರಕಟಿಸಿದಾಗ ಜಿಲ್ಲೆಯ ಬಹುಪಾಲು ಜನರು ಸೆಂಟ್ರಲ್ ಕಮಿಟಿಯ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದರು.

ವಿರೋಧಿಗಳಿಗೆ ಬೇಕಾದದ್ದೂ ಕೂಡ ಅದುವೇ ಆಗಿತ್ತು. ಆದರೆ ಇಲ್ಲಿನ ಪ್ರಜ್ಞಾವಂತ ಮುಸ್ಲಿಂ ಸಮುದಾಯವು ಜಿಲ್ಲೆಯಲ್ಲಿ ನಡೆಯುತ್ತಿರುವ ಷಡ್ಯಂತ್ರಗಳನ್ನು ಅರ್ಥೈಸಿಕೊಂಡು ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಪಣತೊಟ್ಟಾಗ ಕೆಲವು ಕಾಣದ ಕೈಗಳು, ಕೆಲ ಪೋಲೀಸ್ ಅಧಿಕಾರಿಗಳ ಜೊತೆ ಸೇರಿ ಮುಸ್ಲಿಮರ ಒಗ್ಗಟ್ಟನ್ನು ಹೇಗಾದರೂ ಮಾಡಿ ಇಲ್ಲವಾಗಿಸಬೇಕೆಂದುಕೊಂಡು ಒಂದು ಸ್ಕ್ರೀನ್ ಶಾಟ್ ನ ಹೆಸರಿನಲ್ಲಿ ಅಮಾಯಕ ಮದ್ರಸಾ ಅಧ್ಯಾಪಕರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ಅಡ್ಯಾರ್ ಕಣ್ಣೂರಿನಲ್ಲಿ ನಡೆಯುವ ಪ್ರತಿಭಟನೆಯನ್ನು ಪರಾಜಯಗೊಳಿಸುವ ಹುನ್ನಾರದಲ್ಲಿ ತೊಡಗಿದ್ದಾರೆ.

ಒಬ್ಬ ಗೌರವಯುತ ಸ್ಥಾನದಲ್ಲಿರುವ ಖಾಝಿಗಳು ಇಂತಹ ಕ್ಷುಲ್ಲಕ ವಿಷಯಗಳನ್ನು ಮಾತುಕತೆಯ ಮೂಲಕ ಬಗೆಹರಿಸದೆ ಕಾಣದ ಕೈಗಳ ಷಡ್ಯಂತ್ರಗಳಿಗೆ ಒಬ್ಬ ಅಮಾಯಕ ಮದ್ರಸಾ ಅಧ್ಯಾಪಕರನ್ನು ಬಲಿಪಶುವನ್ನಾಗಿ ಮಾಡಿಸಿದ್ದು ಖಂಡನೀಯವೆಂದು ಸುನ್ನೀ ಸಾಹಿತ್ಯ ಮಂಡಳಿ ಕರ್ನಾಟಕ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com