janadhvani

Kannada Online News Paper

ಮಂಗಳೂರು ಪೋಲಿಸ್ ಗೋಲಿಬಾರ್: ಎಸ್ಸೆಸ್ಸೆಫ್ ಖಂಡನೆ

ಮಂಗಳೂರಿನಲ್ಲಿ ಅನ್ಯಾಯವಾಗಿ ಇಬ್ಬರು ಅಮಾಯಕರನ್ನು ಗುಂಡಿಕ್ಕಿ ಕೊಂದಿರುವ ಪೋಲಿಸ್ ಇಲಾಖೆಯ ಮೇಲೆ ಜನಸಾಮಾನ್ಯರಿಗಿದ್ದ ವಿಶ್ವಾಸ ಕುಸಿದಿದೆ‌ ಎಂದು ಅಭಿಪ್ರಾಯಿಸಿರುವ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್, ತಪ್ಪಿತಸ್ಥ ಪೋಲಿಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಅನಗತ್ಯವಾಗಿ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ನಾಗರಿಕರಲ್ಲಿ ಗೊಂದಲ ಹುಟ್ಟಿಸಿದ್ದಲ್ಲದೇ; ಗೋಲಿಬಾರ್ ಬಳಿಕ ಸಾವಿರಾರು ಮಂದಿ ಪೋಲಿಸ್ ಸ್ಟೇಷನ್ ಗೆ ಬೆಂಕಿ ಹಚ್ಚಲು ಯತ್ನಿಸಿದ್ದರೆಂದೂ ಸಾರ್ವಜನಿಕರಿಗೆ ಸುಳ್ಳು ಸಂದೇಶ ಹರಡಿರುವ ಪೋಲಿಸ್ ಅಧಿಕಾರಿಯನ್ನು ಅಮಾನತುಗೊಳಿಸಿ ಉನ್ನತಮಟ್ಟದ ತನಿಖೆ ಕೈಗೊಳ್ಳಬೇಕು ಎಂದು ಪ್ರಕಟನೆಯಲ್ಲಿ ಆಗ್ರಹಿಸಿರುವ ಅವರು; ಸಾರ್ವಜನಿಕರು ಶಾಂತಿ ಕಾಪಾಡಬೇಕೆಂದೂ ಕರೆ ನೀಡಿದ್ದಾರೆ.