ಯುಎಇ: ಲಗೇಜ್‌ನಲ್ಲಿ ಸಾಗಿಸಬಾರದ ವಸ್ತುಗಳ ಪಟ್ಟಿ ಪರಿಷ್ಕರಣೆ

ದುಬೈ: ಯುಎಇಯಿಂದ ತೆರಳುವ ಪ್ರಯಾಣಿಕರು ತಮ್ಮೊಂದಿಗೆ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಸಾಗಿಸಬಾರದ ವಸ್ತುಗಳ ಪಟ್ಟಿಯನ್ನು ದುಬೈ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.

13 ತರಹದ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಯುಎಇಗೆ ತರಬಾರದ 22 ವಸ್ತುಗಳ ಪಟ್ಟಿಯ ಹೊರತಾಗಿ ಪೊಲೀಸರು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಅವುಗಳ ವಿವರ:

1. ಸ್ಮಾರ್ಟ್ ಬ್ಯಾಲೆನ್ಸ್ ಚಕ್ರಗಳು ಅಥವಾ ಹೋವರ್‌ಬೋರ್ಡ್‌ಗಳು
2. ರಾಸಾಯನಿಕಗಳು
3. ದೊಡ್ಡ ಲೋಹದ ವಸ್ತುಗಳು
4. ಕಂಪ್ರಸ್ಡ್ ಅನಿಲ ಸಿಲಿಂಡರ್ಗಳು
5. ಕಾರಿನ ಬಿಡಿಭಾಗಗಳು
6. ಬ್ಯಾಟರಿಗಳು
7. ಅಗ್ನಿಗೆ ಆಸ್ಪದವಾಗಬಲ್ಲ ದ್ರವಗಳು
8. ಪವರ್ ಬ್ಯಾಂಕುಗಳು
9. ಲಿಥಿಯಂ ಬ್ಯಾಟರಿ
10. ಟಾರ್ಚ್ ಲೈಟ್‌ಗಳು
11. ದೊಡ್ಡ ಪ್ರಮಾಣದ ದ್ರವಗಳು
12. ಇ ಸಿಗರೇಟ್
13. ದೊಡ್ಡ ಮಟ್ಟದಲ್ಲಿ ಚಿನ್ನ ಮತ್ತು ಹಣದಂತಹ ಅಮೂಲ್ಯ ವಸ್ತುಗಳು.

Leave a Reply

Your email address will not be published. Required fields are marked *

error: Content is protected !!