ಖುರ್‌ಆನ್‌ ದಹಿಸುವುದನ್ನು ತಡೆದ ಉಮರ್ ದಬಾ ಇಲ್ಯಾಸ್- ಮುಸ್ಲಿಂ ಜಗತ್ತಿನ ವೀರ

ನಾರ್ವೇ : ನಾರ್ವೆಯಲ್ಲಿ ಭಾರೀ ಖೇದಕರ ಘಟನೆಯೊಂದು ನಡೆದಿದ್ದು ಅದು ಇಡೀ ಮುಸ್ಲಿಮ್ ಜಗತ್ತನ್ನು ಬೇಸರದಲ್ಲಿ ಮುಳುಗುವಂತೆ ಮಾಡಿತ್ತು. ಇಲ್ಲಿ ನಡೆದ ಇಸ್ಲಾಂ ವಿರೋಧಿ ರ್ಯಾಲಿಯಲ್ಲಿ ಒಬ್ಬ ನಾಯಕ ಖುರ್ ಆನ್ ಪ್ರತಿಯನ್ನು ಸುಡಲು ಮುಂದಾಗಿದ್ದ, ಆ ಕೂಡಲೇ ಆತನ ವಿರುದ್ಧ ಧುಮುಕಿದ ಯುವಕನನ್ನು ಇಂದು ಮುಸ್ಲಿಂ ಜಗತ್ತಿನ ವೀರ ಎಂದು ಬಣ್ಣಿಸಲಾಗುತ್ತಿದೆ. ಹೌದು, ಒಮರ್ ದಬಾ ಇಲ್ಯಾಸ್ ಪವಿತ್ರ ಖುರ್‌ಆನ್‌ನ ಪ್ರತಿಯನ್ನು ಸುಡದಂತೆ ಉಳಿಸಿದ ಧೀರ ಯುವಕ.

ನಾರ್ವೇಜಿಯನ್ ವ್ಯಕ್ತಿಯೊಬ್ಬ ಪವಿತ್ರ ಖುರ್‌ಆನ್‌ ನಕಲನ್ನು ಸುಡಲು ಪ್ರಯತ್ನಿಸುತ್ತಿದ್ದರೆ, ಒಮರ್ ದಬಾ ಇಲ್ಯಾಸ್ ಬೇಲಿಯ ಮೇಲೆ ಹಾರಿ ಆ ವ್ಯಕ್ತಿಯ ಮೇಲೆ ಧುಮುಕಿ, ಖುರ್‌ಆನ್‌ ದಹಿಸುವುದನ್ನು ತಡೆದರು. ನೂರಾರು ಪ್ರೇಕ್ಷಕರು ಇಲ್ಯಾಸರ ಧೀರತೆಯನ್ನು ವೀಕ್ಷಿಸುತ್ತಿದ್ದರು. ನಾರ್ವೇಜಿಯನ್ ವ್ಯಕ್ತಿಯನ್ನು ಲಾರ್ಸ್ ಥಾರ್ಸನ್ ಎಂದು ಗುರುತಿಸಲಾಗಿದೆ.

ಕ್ರಿಸ್ಟಿಯಾನ್‌ಸಂದ್ ನಗರದಲ್ಲಿ ಸ್ಟಾಪ್ ಇಸ್ಲಾಮೀಜಿಯನ್ ಆಫ್ ನಾರ್ವೆ (ಸಿಯಾನ್) ಈ ರ್ಯಾಲಿಯನ್ನು ಆಯೋಜಿಸಿದೆ. ಇಲ್ಯಾಸ್ ಲಾರ್ಸ್ ಥಾರ್ಸನ್‌ನನ್ನು ತಡೆದು ಸಮಯಕ್ಕೆ ಸರಿಯಾಗಿ ಖುರ್‌ಆನ್‌ ಪ್ರತಿಯನ್ನು ಉಳಿಸಿದರು. ಕೋಪಗೊಂಡ ಇಲ್ಯಾಸ್ ಥಾರ್ಸನ್‌ನನ್ನು ಒದ್ದು ಹೊಡೆದರು.

ಘಟನೆಯ ವಿಡಿಯೋ ವೈರಲ್ ಆದಾಗಿನಿಂದ, ಒಮರ್ ದಬಾ ಇಲ್ಯಾಸ್ ಅವರನ್ನು ಮುಸ್ಲಿಂ ಜಗತ್ತಿನ ವೀರ ಎಂದು ಪ್ರಶಂಸಿಸಲಾಗುತ್ತಿದೆ. ಪ್ರಪಂಚದಾದ್ಯಂತದ ಮುಸ್ಲಿಮರು ತಮ್ಮ ಭಾವನೆಗಳನ್ನು ಹಂಚುತ್ತಿದ್ದು, ಇಲ್ಯಾಸ್ ಅವರ ತ್ಯಾಗವನ್ನು ಅಭಿನಂದಿಸಿದರು.

ಒಮರ್ ದಬಾ ಇಲ್ಯಾಸ್ ಯಾರು?
ಪಾರ್ಹ್ಲೋ ಅವರ ಸಂಶೋಧನೆಯ ಪ್ರಕಾರ, ಒಮರ್ ದಬಾ ಇಲ್ಯಾಸ್ ಯುವ ಸಿರಿಯನ್ ಮುಸ್ಲಿಂ ವ್ಯಕ್ತಿ, ಅವರು ಮೂಲತಃ ಸಿರಿಯಾದ ಅಲೆಪ್ಪೊ ಮೂಲದವರು. ಆದಾಗ್ಯೂ, ಪ್ರಸ್ತುತ, ಒಮರ್ ದಬಾ ಇಲ್ಯಾಸ್ ನಾರ್ವೆಯ ಕ್ರಿಸ್ಟಿಯಾನ್ಸಾಂಡ್ನಲ್ಲಿ ವಾಸಿಸುತ್ತಿದ್ದಾರೆ.

ಹೆಚ್ಚಿನ ಸಂಶೋಧನೆಗಳ ಪ್ರಕಾರ ಒಮರ್ ದಬಾ ಇಲ್ಯಾಸ್ ನಾರ್ವೆಯ ಶಾಮ್, ಸಿರಿಸ್ಕ್ ಮ್ಯಾಟ್ ಎಂಬ ಸಿರಿಯನ್ ರೆಸ್ಟೋರೆಂಟ್‌ನಲ್ಲಿ ದುಡಿಯುತ್ತಿದ್ದು, ಇದು ಅರೇಬಿಕ್ ಆಹಾರವನ್ನು ಪೂರೈಸುವ ಅಡುಗೆ ವ್ಯವಹಾರವಾಗಿದೆ. ಇಲ್ಯಾಸ್, ಈ ಘಟನೆಯ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಹೀರೊ ಆಗಿ ಮಾರ್ಪಟ್ಟಿದ್ದು, ವಿವಿಧ ದೇಶಗಳ ಮುಸ್ಲಿಮರು ತಮ್ಮ ಫೇಸ್‌ಬುಕ್ ಐಡಿಯಲ್ಲಿ ಪ್ರೀತಿಯನ್ನು ಕಳುಹಿಸುತ್ತಿದ್ದಾರೆ.

ಕೇವಲ ಸಾಮಾನ್ಯ ಜನರು ಮಾತ್ರವಲ್ಲದೆ , ಇಸ್ಲಾಮಿಕ್ ಸರ್ಕಾರಗಳು ಮತ್ತು ಇತರ ಪ್ರಮುಖ ವ್ಯಕ್ತಿಗಳು ಕೂಡ ತಮ್ಮ ಧ್ವನಿಯನ್ನು ಅಭಿನಂದನೆಯ ಮಹಾಪೂರವನ್ನೇ ಹಂಚಿದ್ದಾರೆ. ಪಾಕಿಸ್ತಾನದ ಡಿಜಿ ಐಎಸ್ಪಿಆರ್ ಆಸಿಫ್ ಗಫೂರ್ ಅವರು ಒಮರ್ ದಬಾ ಇಲಿಯಾಸ್ ಮಾಡಿದ್ದಕ್ಕೆ ಗೌರವ ಸಲ್ಲಿಸಿದವರಲ್ಲಿ ಮೊದಲಿಗರು.

ನಾರ್ವೇಜಿಯನ್ ಪೊಲೀಸರು ಆರಂಭದಲ್ಲಿ ಇಲ್ಯಾಸ್ ರನ್ನು ಬಂಧಿಸಿ, ಬಿಡುಗಡೆ ಮಾಡಿದ್ದಾರೆ. ಈಗ ಅವರ ಸಂರಕ್ಷಣೆಗಾಗಿ ಅವರ ಸ್ನೇಹಿತರು ಮತ್ತು ಕುಟುಂಬವು ಮುಂದಾಗಿದ್ದಾರೆ. ಒಮರ್ ದಬಾ ಇಲ್ಯಾಸ್ ಅವರು ಮಾಡಿದ ಕೆಲಸಕ್ಕೆ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಬಹುದೆಂದು ವದಂತಿಗಳಿವೆ, ಆದರೆ ಖುರ್‌ಆನ್‌ ಅನ್ನು ಬಹಿರಂಗವಾಗಿ ಸಮರ್ಥಿಸಿಕೊಂಡ ವ್ಯಕ್ತಿಯು ಖಂಡಿತವಾಗಿಯೂ ಅಂತಹ ಬೆದರಿಕೆಗಳಿಗೆ ಹೆದರುವುದಿಲ್ಲ.

Leave a Reply

Your email address will not be published. Required fields are marked *

error: Content is protected !!