janadhvani

Kannada Online News Paper

ಪವಿತ್ರ ಖುರ್ಆನ್ ಪ್ರತಿಯನ್ನು ದಹಿಸಲು ಯತ್ನ- ನಾರ್ವೆ ರಾಯಭಾರಿಗೆ ಪಾಕ್ ಸಮನ್ಸ್

ಇಸ್ಲಾಮಾಬಾದ್, ನ 24: ನಾರ್ವೆಯ ಕ್ರಿಸ್ಟಿಯಾನ್ ಸ್ಯಾಂಡ್ ನಗರದಲ್ಲಿ ಇಸ್ಲಾಮ್ ಧರ್ಮದ ಪವಿತ್ರ ಗ್ರಂಥ ಖುರ್ಆನ್ ಅಪವಿತ್ರಗೊಳಿಸಿರುವ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪಾಕಿಸ್ತಾನ, ತನ್ನ ರಾಜಧಾನಿಯಲ್ಲಿರುವ ನಾರ್ವೆ ರಾಯಭಾರಿಯನ್ನು ವಿದೇಶಾಂಗ ಕಚೇರಿಗೆ ಬರುವಂತೆ ಸಮನ್ಸ್ ನೀಡಿದೆ.

ಕ್ರಿಸ್ಟಿಯಾನ್ ಸ್ಯಾಂಡ್ ನಲ್ಲಿ ವಾರದ ಆರಂಭದಲ್ಲಿ ನಡೆದ “ನಾರ್ವೆಯಲ್ಲಿ ಇಸ್ಲಾಮೀಕರಣ ತಡೆ” ಆಂದೋಲನ ನಡೆಸಿದ ಸಮಾವೇಶದಲ್ಲಿ, ಆಂದೋಲನದ ಹೋರಾಟಗಾರ ಲಾರ್ಸ್ ಥೋರಸನ್, ಪೊಲೀಸರ ಎಚ್ಚರಿಕೆಯನ್ನೂ ಕಡೆಗಣಿಸಿ, ಪವಿತ್ರ ಖುರ್ಆನ್ ಪ್ರತಿಯನ್ನು ದಹಿಸಲು ಯತ್ನಿಸಿದರು, ಧರ್ಮಗ್ರಂಥದ ಪ್ರತಿ ಸುಡುವುದನ್ನು ಉಮರ್ ದಬಾ ಇಲ್ಯಾಸ್ ಎಂಬವರು ತಡೆಯಲು ಮುಂದಾದಾಗ ಸ್ಥಳದಲ್ಲಿ ಗಲಭೆ ನಡೆದಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ನಾರ್ವೆ ರಾಯಬಾರಿಯನ್ನು ವಿದೇಶಾಂಗ ಕಚೇರಿ ಇಂದು ಸಂಪರ್ಕಿಸಿ, ನಾರ್ವೆಯ ಕ್ರಿಸ್ಟಿಯಾನ್ ಸ್ಯಾಂಡ್ ನಗರದಲ್ಲಿ ಪವಿತ್ರ ಗ್ರಂಥವನ್ನು ಅಪಮಾನಿಸುವ ಘಟನೆಗೆ ಪಾಕಿಸ್ತಾನದ ಜನತೆ ಹಾಗೂ ಸರ್ಕಾರದ ತೀವ್ರ ಕಳವಳವನ್ನು ಮನದಟ್ಟುಮಾಡಿಕೊಡಲಾಗಿದೆ. ಘಟನೆ ಸಂಬಂಧ ಪಾಕಿಸ್ತಾನದ ಖಂಡನೆಯನ್ನು ಪುನರುಚ್ಚರಿಸಲಾಗಿದೆ. ಇಂತಹ ಕೃತ್ಯಗಳು ಪಾಕಿಸ್ತಾನ ಸೇರಿದಂತೆ ಜಗತ್ತಿನೆಲ್ಲೆಡೆಯಿರುವ 1.3 ಬಿಲಿಯನ್ ಮುಸ್ಲಿಮರ ಭಾವನೆಗಳನ್ನು ತೀವ್ರ ಘಾಸಿಗೊಳಿಸುತ್ತವೆ. ಇಂತಹ ಕ್ರಮಗಳನ್ನು ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕ್ ವಿದೇಶಾಂಗ ಸಚಿವಾಲಯ ಹೇಳಿದೆ.

ಘಟನೆಯನ್ನು ಖಂಡಿಸಿರುವ ಪಾಕಿಸ್ತಾನದಲ್ಲಿರುವ ನಾರ್ವೆ ರಾಯಭಾರಿ
ಕೆಜೆಲ್-ಗುನ್ನಾರ್ ಎರಿಕ್ಸೆನ್, ನಾರ್ವೆ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಹಾಗೂ ತಮ್ಮ ಧರ್ಮಾಚರಣೆಯ ಹಕ್ಕು ಕಲ್ಪಿಸಲಾಗಿದೆ ಎಂದು ಸಮರ್ಥಿಸಿಕೊಡಿದ್ದಾರೆ
ಇಂತಹ ಘಟನೆಗಳೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಪಾಕಿಸ್ತಾನ ನಾರ್ವೆ ಸರ್ಕಾರವನ್ನು ಆಗ್ರಹಿಸಿದೆ.

error: Content is protected !! Not allowed copy content from janadhvani.com