ದುಬೈ: ಕೊಡಗು ಜಿಲ್ಲೆಯಲ್ಲಿ ನಿರಾಶ್ರಿತರ ಸಹಾಯಕ್ಕಾಗಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸಮಿತಿಯು ನಡೆಸುತ್ತಿರುವ ಸಾಂತ್ವನ ಕಾರ್ಯಗಳು ಅತ್ಯಂತ ಪ್ರೋತ್ಸಾಹಿಸಬೇಕಾದದ್ದು, ಜಿಲ್ಲೆಯ ಅನಿವಾಸಿ ಬಾಂಧವರು ಇಂತಹ ಸತ್ಕರ್ಮದಲ್ಲಿ ಕೈ ಜೋಡಿಸಿ ಸಂಘಟನೆಗೆ ಇನ್ನಷ್ಟು ಬಲವನ್ನು ನೀಡಬೇಕಾದದ್ದು ಅನಿವಾರ್ಯವಾಗಿದೆ ಎಂದು ವಿಶ್ವ ವಿಖ್ಯಾತ ಮಅ’ದಿನ್ ಅಕಾಡೆಮಿ ಶಿಲ್ಪಿಯೂ, ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿಯೂ ಆದ ಬದ್ರುಸ್ಸಾದಾತ್ ಸಯ್ಯದ್ ಖಲೀಲುಲ್ ಬುಖಾರಿ ತಂಘಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯ ಆಶ್ರಯದಲ್ಲಿ ದುಬೈನಲ್ಲಿ ನಡೆದ ಬೃಹತ್ ಮೀಲಾದ್ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಪ್ರಾರ್ಥನೆಗೆ ನೇತೃತ್ವ ನೀಡಿದ ಸಯ್ಯದ್ ರವರು ವೆಲ್ಫೇರ್ ಸಮಿತಿಯು ಜಿಲ್ಲೆಯಲ್ಲಿ ಜಾತಿ ಭೇದವಿಲ್ಲದೆ ಶೋಷಿತರ ಸಹಾಯಕ್ಕಾಗಿ ಶ್ರಮಿಸುತ್ತಿರುವ ಕಾರ್ಯಗಳಲ್ಲಿ ಸಹಾಯ ಹಸ್ತ ಚಾಚಲು ಕರೆನೀಡಿದರು.
ಸ್ವಾಗತ ಸಮಿತಿ ಛೇರ್ಮನ್ ಅಹ್ಮದ್ ಚಾಮಿಯಾಲ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಜಲೀಲ್ ನಿಝಾಮಿ ಎಮ್ಮೆಮಾಡು, ಕೆಸಿಎಫ಼್ ಅಂತರಾಷ್ಟ್ರೀಯ ನಾಯಕರಾದ ಅಲಿ ಮುಸ್ಲಿಯಾರ್ ಬಹರೈನ್, ಮೂರ್ನಾಡು ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಮಜೀದ್, ಹೆಚ್ ಎಂ ಅಬ್ದುಲ್ಲಾ ಹಾಜಿ ಕೊಂಡಂಗೇರಿ, ಹಾಫಿಝ್ ದರ್ವೀಷ್ ಅಲಿ ಬಹರೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
KSWA ಗಲ್ಫ್ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಹಾಜಿ ನಾಪೋಕ್ಲು, KSWA ಯುಎಇ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ, ಹಮೀದ್ ನಾಪೋಕ್ಲು, ಮುಹಮ್ಮದ್ ಹಾಜಿ ಕೊಂಡಂಗೇರಿ, ಹಮೀದ್ ಚಾಮಿಯಾಲ್, ಇಬ್ರಾಹಿಂ ಮುಸ್ಲಿಯಾರ್ ಕುಂಜಿಲ, ಇಬ್ರಾಹಿಂ ಫೈಝಿ ಚಾಮಿಯಾಲ್ ಸೇರಿದಂತೆ ಕೆಸಿಎಫ್ ದುಬೈ ಝೋನಲ್ ನಾಯಕರುಗಳು, ಸಾಂಘಿಕ, ಸಾಮಾಜಿಕ ರಂಗದ ಪ್ರಮುಖರು, ಯುಎಇ ವಿವಿಧ ಉದ್ಯಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಾವೇಶದ ಅಂಗವಾಗಿ ಶಾಹುಲ್ ಹಮೀದ್ ಸಖಾಫಿ ನೇತೃತ್ವದಲ್ಲಿ ನಡೆದ ಕಲಾಮಿಲನ ಕಾರ್ಯಕ್ರಮದಲ್ಲಿ ಕೊಡಗಿನ ಹಲವು ಪ್ರತಿಭಾವಂತ ವಿಧ್ಯಾರ್ಥಿಗಳ ಭಾಷಣ, ಹಾಡುಗಳು ಸಮಾರಂಭಕ್ಕೆ ಮೆರುಗನ್ನು ತಂದು ಕೊಟ್ಟಿತು, ಗುಂಡಿಗೆರೆ ಯುವಕರ ದಫ್ಫ್ ಪ್ರದರ್ಶನವು ವರ್ಣರಂಜಿತವಾಗಿತ್ತು. ಮಹಿಳೆಯರಿಗಾಗಿ ವಿಶೇಷ ಸ್ಪರ್ಧೆಗಳು ನಡೆದು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಯುಎಇ ಯಲ್ಲಿರುವ ಸುಮಾರು 400 ರಷ್ಟು ಅನಿವಾಸಿ ಕೊಡಗಿನ ಭಾಂದವರು ಭಾಗವಹಿಸಿದ ಕಾರ್ಯಕ್ರಮವು ಹಬ್ಬದ ಹುಮ್ಮಸ್ಸನ್ನು ನೀಡಿತ್ತು. KSWA ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡ್ ಮುನ್ನುಡಿ ಭಾಷಣ ಮಾಡಿದರು, ರಿಯಾಝ್ ಕೊಂಡಂಗೇರಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಅರಾಫತ್ ನಾಪೋಕ್ಲು ಕೊನೆಯಲ್ಲಿ ವಂದನಾರ್ಪಣೆ ನೆರವೇರಿಸಿದರು.